ಮೇಲಂತಬೆಟ್ಟು: ಹೆಜ್ಜೇನು ದಾಳಿಯಿಂದ ಮಗುವನ್ನು ರಕ್ಷಿಸಿದ ಮೇಲಂತಬೆಟ್ಟು ಗ್ರಾಮ ಪಂಚಾಯತ್ ಸಿಬ್ಬಂದಿ ಚಂದ್ರಾವತಿ

0

ಮೇಲಂತಬೆಟ್ಟು: ಗ್ರಾಮ ಪಂಚಾಯಿತಿ ಬಳಿ ಅ. 26 ರಂದು ಸಂಜೆ ಹೆಜ್ಜೇನು ಜನರ ಮೇಲೆ ದಾಳಿ ಮಾಡಿತು. ಜನ ಭಯದಿಂದ ಓಡಿಹೋದರು. ಸುತ್ತಲೂ ಇದ್ದಂತಹ ಮನೆಯವರು ಭೀತಿಯಿಂದ ಮನೆಬಾಗಿಲು ಮುಚ್ಚಿದರು.

ಆ ಸಮಯದಲ್ಲಿ ಸಂತ ತೇರೆಜ ಶಾಲೆಯ 8ನೇ ತರಗತಿ ವಿದ್ಯಾರ್ಥಿ ತೀರ್ಥೇಶ್ ಶಾಲೆಯಿಂದ ಮನೆ ಕಡೆ ಬರುತಿದ್ದು ಇವರ ಮೇಲೆ ತೀವ್ರ ವಾಗಿ ಹೆಜ್ಜೇನು ದಾಳಿ ನಡೆಸಿತು. ದಾರಿ ತೋರದೆ ಕೆಲ ಮನೆಗಳಿಗೆ ಓಡಿದನು. ಭಯ ಭೀತಿಯಿಂದಾಗಿ ಮನೆ ಬಾಗಿಲು ಮುಚ್ಚಿತ್ತು.

ಹೆಜ್ಜೇನು ದಾಳಿಯಿಂದ ನೋವು ಉರಿ ತಾಳಲಾರದೆ ಅತ್ತು ಕರೆದರೂ ರಕ್ಷಣೆಗೆ ಯಾರು ಇಲ್ಲದಾಗ ಕೊನೆಗೆ ಉಪಾಯ ಇಲ್ಲದೆ ಪಂಚಾಯತ್ ಬಳಿ ಓಡಿದಾಗ ಪಂಚಾಯತ್ ಸಿಬ್ಬಂದಿ ಚಂದ್ರಾವತಿ ಯೋಗಿಶ್ ಪೂಜಾರಿ ಗೇರುಕಟ್ಟೆ ಮುಚ್ಚಿದ್ದ ಬಾಗಿಲನ್ನು ತೆರೆದು ಮಗುವನ್ನು ಪಂಚಾಯತ್ ಒಳಗೆ ಕರ್ಕೊಂಡು ಹೋದರು. ಆದರೂ ಬೆನ್ನು ಬಿಡದ ಹೆಜ್ಜೇನು ಅಲ್ಲಿಯೂ ದಾಳಿ ಮಾಡಿತು.
ಮುಂದಕ್ಕೆ ಅಧ್ಯಕ್ಷರ ಕೊಠಡಿಯ ಒಳಗೆ ಹೋಗಿ ಬಾಗಿಲು ಮುಚ್ಚಿ ನೋಡಿದಾಗ ಅಲ್ಲಿಯೂ ಕೂಡ ಹೆಜ್ಜೇನು ಇದ್ದು ದಾಳಿ ಮಾಡಿತು.
ಮತ್ತೆ ಚಂದ್ರವತಿಯವರು ಹಿಡುಸುಡಿ ಸಹಾಯದಿಂದ ಬಹಳಷ್ಟು ಸಂಖ್ಯೆಯಲ್ಲಿ ಇದ್ದ ಹೆಜ್ಜೇನುವನ್ನು ಕೊಂದು ಮಗುವಿನ ಬಟ್ಟೆ ಬಿಚ್ಚಿಸಿ ಹೆಜ್ಜೇನು ಮುಳ್ಳನ್ನು ತುರ್ತಾಗಿ ತೆಗೆದು ಮನೆಯವರಿಗೆ ಸುದ್ದಿ ಮುಟ್ಟಿಸಿದರು. ನಂತರ ಮಗುವನ್ನು ಆಸ್ಪತ್ರೆಗೆ ಸೇರಿಸಿ ಸೂಕ್ತ ಚಿಕಿತ್ಸೆ ನೀಡಲಾಯಿತು.

p>

LEAVE A REPLY

Please enter your comment!
Please enter your name here