ಉಜಿರೆ: ಐಟಿ ಕ್ವಿಜ್‌ ಸ್ಪರ್ಧೆಯಲ್ಲಿ ಉಜಿರೆಯ ಎಸ್‌.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿಗಳು ವಿಭಾಗೀಯ ಮಟ್ಟಕ್ಕೆ ಆಯ್ಕೆ

0

ಉಜಿರೆ: ಅ.25ರಂದು ಮಂಗಳೂರು ಕಪಿತಾನಿಯೋ ಶಾಲೆಯಲ್ಲಿ ನಡೆದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ಲಿಮಿಟೆಡ್ ಮತ್ತು ಕರ್ನಾಟಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ನಡೆದ 25ನೇ ವರ್ಷದ ಜಿಲ್ಲಾಮಟ್ಟದ ಐಟಿ ಕ್ವಿಜ್‌ ಸ್ಪರ್ಧೆಯಲ್ಲಿ ಉಜಿರೆ ಎಸ್‌.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆ ರಾಜ್ಯಪಠ್ಯಕ್ರಮದ ಒಂಬತ್ತನೇ ತರಗತಿಯ ಸಚಿತ್ ಭಟ್, ದಿಶಾನ್ ಮತ್ತು ಎಂಟನೇ ತರಗತಿಯ ತನ್ಮಯ ಕೃಷ್ಣ ಭಾಗವಹಿಸಿ ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಇವರು ಅ.28ರಂದು ಮೈಸೂರಿನ ಶಾರದಾ ವಿಲಾಸ ಶಿಕ್ಷಣ ಸಂಸ್ಥೆಗಳ ಶತಮಾನೋತ್ಸವ ಭವನದಲ್ಲಿ ನಡೆಯಲಿರುವ ವಿಭಾಗೀಯ ಮಟ್ಟದ ಗ್ರಾಮೀಣ ಮಾಹಿತಿ ತಂತ್ರಜ್ಞಾನ ರಸಪ್ರಶ್ನೆ ಕಾರ್ಯಕ್ರಮವಲ್ಲಿ ಭಾಗವಹಿಸಲಿದ್ದಾರೆ. ಇವರಿಗೆ ಶಾಲಾ ಕಂಪ್ಯೂಟರ್ ಶಿಕ್ಷಕಿ ಸೌಮ್ಯ ತರಬೇತಿ ನೀಡಿರುತ್ತಾರೆ.

p>

LEAVE A REPLY

Please enter your comment!
Please enter your name here