ಬೆಳ್ತಂಗಡಿ: ಅ.22ರಂದು ದಿಡುಪೆ ಗ್ರಾಮಸ್ಥರು ಹಾಗೂ ರಸ್ತೆ ಸಾರಿಗೆ ವ್ಯವಸ್ಥಾಪಕರ ಮೂಲಕ ಬೆಳಗ್ಗೆ 7.30ಕ್ಕೆ ಸರಿಯಾಗಿ ದಿಡುಪೆಯಿಂದ ಸುಮಾರು 2.5ಕಿ.ಮೀ. ಮಲವಂತಿಗೆ ಗ್ರಾಮದ ಸರಕಾರಿ ಕಿರಿಯ ಪ್ರಾರ್ಥಮಿಕ ಶಾಲೆ ಕಜಕ್ಕೆ, ಮಲವಂತಿಗೆ ಭಾಗಕ್ಕೆ ವಿದ್ಯಾರ್ಥಿಗಳ ಹಾಗೂ ಸಾರ್ವಜನಿಕ ಗ್ರಾಮಸ್ಥರ ಅನುಕೂಲಕ್ಕಾಗಿ ಮಲವಂತಿಗೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ರೋಹಿಣಿ ಜಯವರ್ಮ ಗೌಡ ಕಲ್ಬೆಟ್ಟು ಇವರ ಮೂಲಕ ಸರ್ಕಾರಿ ಬಸ್ ಗೆ ಚಾಲನೆ ನೀಡಲಾಯಿತು.
ರಸ್ತೆ ಸಾರಿಗೆ ಸಂಪರ್ಕ ವಿಸ್ತರಣೆ ವ್ಯವಸ್ಥೆಗೆ ಜುಲೈ.1ರಂದು ಮಾನ್ಯ ಶಾಸಕ ಹರೀಶ್ ಪೂಂಜಾ ಕೆ.ಆರ್.ಟಿ.ಸಿ. ಜನಸ್ಪಂದನಾ ಕಾರ್ಯಕ್ರಮ ಏರ್ಪಡಿಸಿದ್ದರು. ಈ ಸಂದರ್ಭದಲ್ಲಿ ಮಲವಂತಿಗೆ ಗ್ರಾಮದ ತೀಕ್ಷಿತ್ ಕೆ.ಕಲ್ಪೆಟ್ಟು ಇವರು ವೇದಿಕೆಯಲ್ಲಿ ಗ್ರಾಮದ ಅಭಿವೃದ್ಧಿಯ ಉದ್ದೇಶದಿಂದ ತಮ್ಮ ಅಭಿಪ್ರಾಯವನ್ನು ಸಭೆಯಲ್ಲಿ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕಜಕ್ಕೆ, ಮಲವಂತಿಗೆ ಇದ್ದು, ಇಲ್ಲಿ ಸುಮಾರು 100 ಕ್ಕೂ ಅಧಿಕ ವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನು ಮಾಡುತ್ತಿದ್ದು, ಅದಲ್ಲದೆ ವಿವಿಧ ರೀತಿಯ ಚಟುವಟಿಕೆಯಲ್ಲಿ ಹಾಗೂ ಉತ್ತಮ ಶಾಲೆ ರಾಜ್ಯ ಮಟ್ಟದ ಪ್ರಶಸ್ತಿಯನ್ನು ಪಡೆದುಕೊಂಡಂತಹ ವಿದ್ಯಾಸಂಸ್ಥೆಯಾಗಿದ್ದು, ಅದಲ್ಲದೆ ಮಲವಂತಿಗೆ ಮತ್ತು ಮಿತ್ತಬಾಗಿಲು ಕೇವಲ 2 ಗ್ರಾಮದ ವಿದ್ಯಾರ್ಥಿಗಳು ಸರಕಾರಿ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದು, ಇಲ್ಲಿಯವರೆಗೆ ರಸ್ತೆ ಇದ್ದರೂ ಕೂಡ ಮೂಲಭೂತ ಸೌಕರ್ಯದ ಕೊರತೆಯಿಂದ ಸುಮಾರು 2.5ಕಿ.ಮೀ. ನಡೆದುಕೊಂಡು ಹೋಗುವ ಪರಿಸ್ಥಿತಿ ಸುಮಾರು ವರ್ಷಗಳಿಂದ ನಡೆಯುತ್ತಿತ್ತು. 250ಕ್ಕೂ ಅಧಿಕ ಮನೆಗಳಿದ್ದು ಅಲ್ಲಿಯ ವಿದ್ಯಾರ್ಥಿಗಳಿಗೆ ಹಾಗೂ ಗ್ರಾಮಸ್ಥರಿಗೆ ತುಂಬಾ ಅನುಕೂಲ ಆಗುವಂತೆ ಕೆ.ಆರ್.ಟಿ.ಸಿ. ಪುತ್ತೂರು ವಿಭಾಗಕ್ಕೆ ಹಾಗೂ ಕೆ.ಆರ್.ಟಿ.ಸಿ. ಧರ್ಮಸ್ಥಳ ವಿಭಾಗಕ್ಕೆ ಹಾಗೂ ಮಾನ್ಯ ಶಾಸಕರಿಗೆ ಜುಲೈ 01ರಂದು ಕೆ.ಆರ್.ಟಿ.ಸಿ. ಜನಸ್ಪಂದನಾ ಸಭೆಯ ಮೂಲಕ ಗ್ರಾಮಸ್ಥರ ಪರವಾಗಿ ನೀಡಿದ ಮನವಿಗೆ ಸ್ಪಂದಿಸಿ, ಬಸ್ ಸಂಚಾರ ವಿಸ್ತರಣೆ ಅನುಕೂಲವಾಯಿತು.
ಬೆಳಗ್ಗೆ 7.30ಕ್ಕೆ ಸರಿಯಾಗಿ ಎರಡು ಕೆ.ಆರ್.ಟಿ.ಸಿ. ಬಸ್ ಗಳನ್ನು ದಿಡುಪೆಯಿಂದ ಕಜಕ್ಕೆ ಭಾಗಕ್ಕೆ ವಿಶೇಷ ರೀತಿಯಲ್ಲಿ ಪುಟ್ಟ ವಿದ್ಯಾರ್ಥಿಗಳೊಂದಿಗೆ ಗ್ರಾಮಸ್ಥರು ಸೇರಿ ಹೂವಿನ ಅಲಂಕಾರ, ಪುಷ್ಪಾರ್ಚನೆ ಹಾಗೂ ಸಿಹಿ ತಿಂಡಿ ಹಂಚಿ, ಸ್ವಾಗತಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಕರ್ನಾಟಕ ಸಾರಿಗೆ ವ್ಯವಸ್ಥೆಯ ಸಿಬ್ಬಂದಿ ವರ್ಗದ ನಾರಾಯಣ ಪೂಜಾರಿ ಮುಂಡಾಜೆ ಹಾಗೂ ಚಾಲಕರು ಮತ್ತು ನಿರ್ವಾಹಕರಾದ ವಿನಾಯಚಂದ್ರ, ಕರುಣಾಕರ ಮತ್ತು ದಯಾನಂದ ಉಪಸ್ಥಿರಿದ್ದರು ಹಾಗೂ ಬಂಗಾಡಿ ಸಿ.ಎ. ಬ್ಯಾಂಕ್ ನಿರ್ದೇಶಕ ಕೇಶವ ಎಂ.ಕೆ., ಮಲವಂತಿಗೆ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ನಾರಾಯಣ ಗೌಡ, ಶ್ರೀ ವಿದ್ಯಾಗಣಪತಿ ಸೇವಾ ಸಮಿತಿ ಅಧ್ಯಕ್ಷ ತೀಕ್ಷಿತ್ ಕೆ. ಕಲ್ಬೆಟ್ಟು, ಶ್ರೀ ಸಾರ್ವಜನಿಕ ಗಣೇಶೋತ್ಸವ ಟ್ರಸ್ಟ್ ನ ಅಧ್ಯಕ್ಷ ಸಂತೋಷ್ ಪೂಜಾರಿ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕಜಕ್ಕೆ ಶಿಕ್ಷಕರಾದ ರಂಗನಾಥ ಮತ್ತು ಪರಮೇಶ್ವರ್, ಎಸ್.ಡಿ.ಎಂ.ಸಿ. ಅಧ್ಯಕ್ಷ ಶೇಖರ ಗೌಡ ಪೊದ್ಕೆತರು
ಹಾಗೂ ಗ್ರಾಮಸ್ಥರಾದ ಮಧುಸೂದನ್ ಮಲ್ಲ, ಶೇಖರ ಗೌಡ ಹೊಳೆಕೆರೆ, ರಾಧಾಕೃಷ್ಣ ಗೌಡ ಮಜಲು, ರಮೇಶ್ ಗೌಡ ವಿದ್ಯಾನಗರ, ಸಚಿನ್ ಗೌಡ ಬದ್ಲಾಯಿ, ಶ್ರೀ ಹರಿ ಭಟ್, ಗೋಪಾಲಕೃಷ್ಣ ದೇವಸ್ಥಾನ ಟ್ರಸ್ಟ್ ಕಾರ್ಯದರ್ಶಿ ಸಂಜೀವ ಗೌಡ ಪುನ್ಕೆದಡಿ, ರಮೇಶ್ ಗೌಡ, ಸಂಪತ್ ಪೂಜಾರಿ ಕಜಕ್ಕೆ, ಸಾಗರ್ ಅಡ್ಡಕೊಡಂಗೆ, ರಾಜೇಶ್ ಗೌಡ ಬರ್ಕಲಟ್ಟು, ಗ್ರಾಮಸ್ಥರು ಹಾಗೂ ಕಜಕ್ಕೆ ಶಾಲೆ ಪುಟಾಣಿಗಳು, ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ವಾಣಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಮುಖ್ಯಸ್ಥ ಉಮೇಶ್ ಗೌಡ ಸ್ವಾಗತಿಸಿ ಮತ್ತು ಶ್ರೀ ವಿದ್ಯಾಗಣಪತಿ ಸೇವೆ ಸಮಿತಿಯ ಕಾರ್ಯದರ್ಶಿ ಜಯಂತ ಹೆಗ್ಡೆ ವಂದನಾರ್ಪಣೆ ಮಾಡಿದರು.