ಉಜಿರೆ : ಭಟ್ಕಳದ ಅಮೀನಾ ಪ್ಯಾಲೇಸ್‌ನಲ್ಲಿ ಆಯೋಜಿಸಿದ AKFA ಕರಾಟೆ ಅಸೋಸಿಯೇಷನ್‌ನಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ ಉಜಿರೆ ಗಾಂಧಿನಗರದ ಪ್ರಮೀತ್ ಕೆ. ಎಂ. ಕಟಾ ಹಾಗೂ ಕುಮಿಟೆಯಲ್ಲಿ ಪ್ರಥಮ ಸ್ಥಾನ ಪಡೆದು ಎರಡು ಚಿನ್ನದ ಪದಕವನ್ನು ಪಡೆದಿರುತ್ತಾರೆ.
ಇವರು ಗಾಂಧಿನಗರ ಉದ್ಯಮಿ ಕೊರಗಪ್ಪ ಹಾಗೂ ಮಲ್ಲಿಕಾ ದಂಪತಿಯ ಪುತ್ರ, ಉಜಿರೆ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆರನೇ ತರಗತಿ ವಿದ್ಯಾರ್ಥಿ. ಉಜಿರೆಯ ಶೋರಿನ್ ರಿಯೋ ಕರಾಟೆ ಅಸೋಸಿಯೇಷನ್ ವಿದ್ಯಾರ್ಥಿಯಾದ ಇವರಿಗೆ ಶಿಯಾನ್ ಅಬ್ದುಲ್ ರಹಮಾನ್ ತರಬೇತಿಯನ್ನು ನೀಡಿರುತ್ತಾರೆ.
p>