ಮುಂಡೂರು : ಮುಂಡೂರು ಶ್ರೀ ನಾಗ ಕಲ್ಲುರ್ಟಿ ದೇವಸ್ಥಾನದಲ್ಲಿ ನವರಾತ್ರಿ ಪ್ರಯುಕ್ತ ಅ.4ರಿಂದ ಅ.11ರವರೆಗೆ ಪ್ರತಿದಿನ ವಿವಿಧ ವೈದಿಕ ಕಾರ್ಯಕ್ರಮ, ಮಹಾಪೂಜೆ, ಅನ್ನಸಂತರ್ಪಣೆ, ಕುಣಿತ ಭಜನೆ, ಉದ್ಭವ ಗಣಪತಿಗೆ ಹಾಗೂ ಶ್ರೀ ದೇವಿ ನಾಗಾಂಬಿಕಾ ಅಮ್ಮನವರಿಗೆ ಜೋಡು ರಂಗಪೂಜೆ, ಆಯುಧ ಪೂಜೆ ಹಾಗೂ ರಾತ್ರಿ ವರಾಹಿ ಮಂತ್ರಮೂರ್ತಿ, ನಾಗಕಲ್ಲುರ್ಟಿ, ಸತ್ಯದೇವತೆ, ದೈವರಾಜ ಗುಳಿಗ, ಕೊರಗಜ್ಜ ದೈವಗಳಿಗೆ ಹರಕೆ ಕೋಲ ನಡೆಯಿತು. ಮೊಕ್ತೇಸರ ರಾಜೀವ, ಶ್ರೀ ನಾಗಾಂಬಿಕಾ ಭಜನಾ ಮಂಡಳಿ ಪದಾಧಿಕಾರಿಗಳು, ಭಾಗವಹಿಸಿದ್ದರು.
ನವರಾತ್ರಿ ಸಂದರ್ಭದಲ್ಲಿ 9 ದಿನ ಶ್ರೀಕ್ಷೇತ್ರ ಮಂಗಳಗಿರಿ ಶ್ರೀ ನಾಗಾಂಬಿಕಾ ಭಜನಾ ಮಂಡಳಿ, ಮಾಲಾಡಿ ಶ್ರೀ ರಾಮಾಂಜನೇಯ ಭಜನಾ ಮಂಡಳಿ, ಪಿಲಿಗೂಡು ಶ್ರೀ ಚಾಮುಂಡೇಶ್ವರೀ ಭಜನಾ ಮಂಡಳಿ, ಚಾರ್ಮಾಡಿ ಶ್ರೀ ಪಂಚಲಿಂಗೇಶ್ವರ ಭಜನಾ ಮಂಡಳಿ, ಪಡ್ಡು ಕನ್ಯಾಡಿ ಮಕರ ಜ್ಯೋತಿ ಭಜನಾ ಮಂಡಳಿ, ಬೆಳಾಲು ಶ್ರೀ ಮಾಯಾ ಮಹೇಶ್ವರ ಮಂಡಳಿ, ಸವಣಾಲು ಶ್ರೀ ಫಲ್ಗುಣಿ ಭಜನಾ ತಂಡ, ಗುರುವಾಯನಕೆರೆ ಶ್ರೀ ಭ್ರಾಮರಿ ಭಜನಾ ಮಂಡಳಿ, ಸೂಳಬೆಟ್ಟು ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿ, ಪೆರ್ಮುಡ ಶ್ರೀ ಜಗದೀಶ್ವರ ಭಜನಾ ಮಂಡಳಿ, ಓಡೀಲು ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ, ಮುಂಡಾಜೆ ಮೂಲಾರಿನ ಶ್ರೀ ರಾಮ ಭಜನಾ ಮಂಡಳಿ, ನೆರಿಯ ಅಪ್ಪೆಲ ಶ್ರೀ ಉಮಾ ಪಂಚಲಿಂಗೇಶ್ವರ ಭಜನಾ ಮಂಡಳಿ, ಬಳಂಜ ಪಂಚಶ್ರೀ ಮಹಿಳಾ ಭಜನಾ ಮಂಡಳಿ, ಸೋಣಂದೂರು ಶ್ರೀ ವ್ಯಾಘ್ರ ಚಾಮುಂಡೇಶ್ವರೀ ಭಜನಾ ಮಂಡಳಿ, ನಡ ಶ್ರೀ ಲಕ್ಷ್ಮೀ ಭಜನಾ ಮಂಡಳಿ ತಂಡಗಳಿಂದ ಕುಣಿತ ಭಜನಾ ಕಾರ್ಯಕ್ರಮ ನಡೆಯಿತು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.