ಅರಸಿನಮಕ್ಕಿ: ಹತ್ಯಡ್ಕ ಗ್ರಾಮದ ನೆಕ್ಕರಡ್ಕದ ಅಂಬರಕಾಪು ಶ್ರೀ ವಿಠೋಬ ರಕುಮಾಯಿ ಸನ್ನಿಧಿಯಲ್ಲಿ ನೂತನ ದೇಗುಲಕ್ಕೆ ಅ.14ರಂದು ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು.
ನೆಕ್ಕರಡ್ಕದಲ್ಲಿ ನೆಲೆಸಿರುವ ಗೋಖಲೆ- ಹೆಬ್ಬಾರ್ ವಂಶಸ್ಥರು ಸುಮಾರು ಮುನ್ನೂರು ವರ್ಷಗಳ ಹಿಂದೆ ಈ ದೇವಸ್ಥಾನವನ್ನು ಸ್ಥಾಪಿಸಿ, ಇಂದಿನವರೆಗೂ ಆ ವಂಶಸ್ಥರು ಪೂಜಾ ಕೈಂಕರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಇದೀಗ ದೇವಸ್ಥಾನವು ಜೀರ್ಣಾವಸ್ಥೆಗೆ ತಲುಪಿದ್ದು ಜೀರ್ಣೋದ್ಧಾರ ಕಾರ್ಯಗಳು ಪ್ರಾರಂಭಗೊಂಡಿವೆ. ಜೀರ್ಣೋದ್ಧಾರದ ಮೊದಲ ಹಂತವಾಗಿ ವೇದಮೂರ್ತಿ ಶ್ರೀ ಸತ್ಯ ಭಟ್ ಬಜಗೋಳಿ ಇವರ ನೇತೃತ್ವದಲ್ಲಿ ಶಿಲಾನ್ಯಾಸ ನೆರವೇರಿತು.
ಬೆಳ್ತಂಗಡಿ ತಾಲೂಕು ಚಿತ್ಪಾವನ ಬ್ರಾಹ್ಮಣ ಸಂಘದ ಅಧ್ಯಕ್ಷ ತ್ರಿವಿಕ್ರಮ ಹೆಬ್ಬಾರ್ ಕೇಳ್ಕರ್, ನಿವೃತ್ತ ಶಿಕ್ಷಕ ಗೋವಿಂದ ದಾಮಲೆ, ಉಜಿರೆ ಸಂಪೂರ್ಣ ಟೆಕ್ಸ್ ಟೈಲ್ಸ್ ಮಾಲಕ ಅನಿಲ್ ಕುಮಾರ್, ಕಳೆಂಜ ಶ್ರೀ ಸದಾಶಿವೇಶ್ವರ ದೇವಸ್ಥಾನ ಆಡಳಿತ ಸಮಿತಿ ಅಧ್ಯಕ್ಷ ಕಾಯಡ ಶ್ರೀಧರ ರಾವ್, ಅರಸಿನಮಕ್ಕಿ ಗ್ರಾ. ಪಂ. ಉಪಾಧ್ಯಕ್ಷ ಸುಧೀರ್ ಕುಮಾರ್, ಸ್ಥಳೀಯ ಮುಖಂಡ ಅಡ್ಕಾಡಿ ಧರ್ಮರಾಜ ಗೌಡ, ತಾ.ಪಂ. ಮಾಜಿ ಸದಸ್ಯ ವಾಮನ ತಾಮ್ಹನ್ಕರ್, ಗೋಖಲೆ-ಹೆಬ್ಬಾರ್ ಕುಟುಂಬಸ್ಥರು, ಗ್ರಾಮಸ್ಥರು, ಊರ ಪರವೂರ ಮಹನೀಯರು ಉಪಸ್ಥಿತರಿದ್ದರು.