ಧರ್ಮಸ್ಥಳ: ನವರಾತ್ರಿ ಪ್ರಯುಕ್ತ ಅ.8ರಂದು ಸಿಂಚನಲಕ್ಷ್ಮೀ ಅವರಿಂದ ಸಂಗೀತ ಕಾರ್ಯಕ್ರಮ ಹಾಗೂ ಶ್ರೀಪ್ರಿಯಾ ಪರಕ್ಕಜೆ ವಯಲಿನ್ ವಾದನ ಕಾರ್ಯಕ್ರಮ ನೀಡಿದರು. ಇವರ ಸಂಗೀತ ಕಾರ್ಯಕ್ರಮಕ್ಕೆ ಮೃದಂಗ ವಾದಕರಾಗಿ ವಿದ್ವಾನ್ ವಸಂತಕೃಷ್ಣ ಕಾಂಚನ, ಕೀಬೋರ್ಡ್ ವಾದಕರಾಗಿ ಅಮ್ಮು ಮಾಸ್ಟರ್ ಕಾಸರಗೋಡು, ರಿದಂಪ್ಯಾಡ್ ವಾದಕರಾಗಿ ಸುಹಾಸ್ ಹೆಬ್ಬಾರ್ ಪುತ್ತೂರು, ನಿರೂಪಕರಾಗಿ ಪದ್ಮರಾಜ್ ಚಾರ್ವಾಕ ಸಹಕರಿಸಿದರು.
ಅ.9ರಂದು ಸ್ವರ ತ್ರಿವೇಣಿ ಗಾಯಕಿಯರಾದ ಪ್ರಸೀದಾ ಪಿ. ರಾವ್ ಧರ್ಮಸ್ಥಳ, ಶ್ರೇಷ್ಠ ಆಳ್ವ ಪುತ್ತೂರು ಹಾಗೂ ದಿಯಾ ರಾವ್ ಮಂಗಳೂರು ಇವರು ಭಕ್ತಿಗಾನಾಮೃತ ಕಾರ್ಯಕ್ರಮವನ್ನು ನೀಡಿದರು. ತಬಲ ವಾದಕರಾಗಿ ಜಗದೀಶ್ ಉಪ್ಪಳ, ಕೀಬೋರ್ಡ್ ವಾದಕರಾಗಿ ಶಿವಾನಂದ ಉಪ್ಪಳ, ರಿದಂಪ್ಯಾಡ್ ವಾದಕರಾಗಿ ಸ್ವರಾಜ್ ಉಪ್ಪಳ ಸಹಕರಿಸಿದರು.
ಅ.10ರಂದು ಕಾರ್ಕಳದ ಆತ್ರೇಯಿ ಕೃಷ್ಣಾ ಸಂಗೀತ ಕಾರ್ಯಕ್ರಮ ನೀಡಿದರು. ಇವರೊಂದಿಗೆ ವಯಲಿನ್ ವಾದಕರಾಗಿ ಮಹತಿ ಕೃಷ್ಣಾ ಕಾರ್ಕಳ, ಮೃದಂಗ ವಾದಕರಾಗಿ ವಿದ್ವಾನ್ ಸುನಾದ ಅಮೈ ಮಂಗಳೂರು, ಮೋರ್ಚಿಂಗ್ ವಾದಕರಾಗಿ ವಿದ್ವಾನ್ ಲಿಖಿತ್ ಕೆ.ಎಂ. ಬೆಂಗಳೂರು ಸಹಕರಿಸಿದರು.