ಬೆಳ್ತಂಗಡಿ: ಶಾಲಾ ಶಿಕ್ಷಣ ಇಲಾಖೆ, ರಾಷ್ಟ್ರೀಯ ಸೇವಾ ಯೋಜನೆ, ಬೆಳ್ತಂಗಡಿ ಶ್ರೀ ಗುರುದೇವ ಪದವಿ ಪೂರ್ವ ಕಾಲೇಜಿನ ವಾರ್ಷಿಕ ವಿಶೇಷ ಶಿಬಿರ ಅ.4ರಂದು ವಾಮದಪದವು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆಯಿತು.
ಬೆಳ್ತಂಗಡಿ ಶ್ರೀ ಗುರುದೇವ ಎಜುಕೇಶನ್ ಟ್ರಸ್ಟ್ ಸದಸ್ಯೆ ಪ್ರೀತಿತಾ ಧರ್ಮವಿಜೇತ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳಲ್ಲಿ ಶಿಸ್ತು, ಸಂಯಮ ಪ್ರಾಮಾಣಿಕತೆ ಬೆಳೆಸುವಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಪಾತ್ರ ಪ್ರಮುಖವಾಗಿದೆ. ವಿದ್ಯಾಸಂಸ್ಥೆಯ ಮರೆಯದ ಮಾಣಿಕ್ಯ ದಿ.ಮಾಜಿ ಶಾಸಕ ಕೆ.ವಸಂತ ಬಂಗೇರ ಆಶೀರ್ವಾದಿಂದ ಶಿಬಿರ ಯಶ್ವಸಿಯಾಗಿ ನಡೆಯಲಿ, ಮಕ್ಕಳು ಕ್ರೀಯಾಶೀಲರಾಗಿ ಹೊರ ಹೊಮ್ಮಲು ಎನೆಸೆಸ್ಸ್ ಸಹಕಾರಿಯಾಗುತ್ತದೆ ಎಂದರು.
ಮಂಗಳೂರು ಪ್ರಾಂತೀಯ ವಿಭಾಗಾಧಿಕಾರಿ ಸವಿತಾ ಎರ್ಮಳ್ ಶಿಬಿರವನ್ನು ಉದ್ಘಾಟಿಸಿ, ರಾಷ್ಟ್ರೀಯ ಸೇವಾ ಯೋಜನೆಯ ಮಹತ್ವತೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಸಂಸ್ಥೆಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ಸುಕೇಶ್ ಕುಮಾರ್, ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಸವಿತಾ, ಪ್ರಮುಖರಾದ ವನಿತಾ, ಅಮ್ಮು ರೈ ಹರ್ಕಾಡಿ, ಎಸ್‌ಡಿಎಂಸಿ ಅಧ್ಯಕ್ಷ ಪ್ರಕಾಶ್ ಶೆಟ್ಟಿ, ಎಸ್ಡಿಎಂಸಿ ಸದಸ್ಯ ಪುರುಷೋತ್ತಮ ಶೆಟ್ಟಿ, ವಾಮದಪದವು ಪದವಿ ಪೂರ್ವ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಶೆಟ್ಟಿ, ಪ್ರೌಢಶಾಲಾ ವಿಭಾಗದ ಪ್ರಭಾರ ಉಪ ಪ್ರಾಂಶುಪಾಲ ವಿದ್ಯಾ ಕುಮಾರಿ, ಕಂಬಳ ಕೋಣದ ಯಜಮಾನ ರಮೇಶ್ ಗಟ್ಟಿ, ಪೂಂಜಾಲಕಟ್ಟೆ ನಾರಾಯಣ ಗುರು ಶಾಲೆ ಪ್ರಾಂಶುಪಾಲ ಸಂತೋಷ್ ಕುಮಾರ್, ಸಹ ಶಿಬಿರಾಧಿಕಾರಿ ಏಂಜಲ್ ಪ್ರಿಯಾ ಹಾಗೂ ಘಟಕದ ನಾಯಕ ವಿಕಾಸ್ ನಾಯಕಿ ಜಯಶ್ರೀ ಉಪಸ್ಥಿತರಿದ್ದರು.
ಯೋಜನಾಧಿಕಾರಿ ಶಿವರಾಜ್ ಗಟ್ಟಿ ಸ್ವಾಗತಿಸಿ, ಸಹಯೋಜನಾಧಿಕಾರಿಗಳಾದ ಚಂದನಾ ವಂದಿಸಿ, ಸೌಜನ್ಯ ನಿರೂಪಿಸಿದರು.