


ಬೆಳ್ತಂಗಡಿ: ಗುರುವಾಯನಕೆರೆ ಶಕ್ತಿನಗರದ ಮುಖ್ಯ ರಸ್ತೆಯ ಡಿವೈಡರ್ ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತ ಪಟ್ಟ ದುರ್ಘಟನೆ ನಡೆದಿದೆ.
ಗುರುವಾರ ಸಂಜೆ (ಅ.10) ಈ ಘಟನೆ ನಡೆದಿದ್ದು, ಮೃತ ಬೈಕ್ ಸವಾರ ಬೆಳ್ತಂಗಡಿಯ ತೆಂಕಕಾರಂದೂರು ಗ್ರಾಮದ ಕಟ್ಟೆ ನಿವಾಸಿ ಸುಧೀಶ್(31) ಎಂದು ಗುರುತಿಸಲಾಗಿದೆ.
ರಭಸವಾಗಿ ಬಂದ ಬೈಕ್ ಡಿವೈಡರ್ ಗೆ ಹೊಡೆದು ಸವಾರ ಅಲ್ಲಿ ಹೊಸದಾಗಿ ಅಳವಡಿಸಲಾಗಿರುವ ಬೀದಿ ದೀಪದ ಕಂಬಕ್ಕೆ ಎಗರಿದ ಪರಿಣಾಮ ತಲೆಗೆ ಬಲವಾದ ಏಟು ಬಿದ್ದು ಮೃತಪಟ್ಟಿದ್ದಾರೆ ಎಂಬುದಾಗಿ ಸ್ಥಳದಲ್ಲಿದ್ದ ಗ್ರಾಮಸ್ಥರು ಹೇಳಿದ್ದಾರೆ


ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಮೃತ ಬೈಕ್ ಸವಾರನನ್ನು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.