ತೋಟತ್ತಾಡಿ: ಧರ್ಮರಕ್ಷಾ ವೇದಿಕೆ ಆಶ್ರಯದಲ್ಲಿ 8ನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಪೂಜೋತ್ಸವ ಉಜಿರೆ ವೇದಮೂರ್ತಿ ವಾದಿರಾಜ ಶಬರಾಯ ಇವರ ನೆತೃತ್ವದಲ್ಲಿ ತೋಟತ್ತಾಡಿ ಶ್ರೀ ನಾರಾಯಣ ಗುರು ಧರ್ಮಪರಿಪಾಲನಾ ಯೋಗಂ (ಎಸ್ಎನ್ ಡಿಪಿ) ಶಾಖೆಯಲ್ಲಿ ಅ.9ರಂದು ನಡೆಯಿತು.
ಕಾರ್ಯಕ್ರಮದಲ್ಲಿ ಶ್ರೀ ಶಾರದಾ ದೇವಿಯ ಮೂರ್ತಿ ಪ್ರತಿಷ್ಠಾಪನೆ ನಂತರ ಭಜನಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಡಾ.ವಂದನಾ ಎಂ. ಇರ್ವತ್ರಾಯ ನವರಾತ್ರಿಯಲ್ಲಿ ಶ್ರೀ ಶಾರದಾ ದೇವಿಯ ಆರಾಧನೆ ಬಹಳ ವಿಶೇಷವಾದದ್ದು ಮತ್ತು ಮಹತ್ವವನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ವಿದೂಷಿ ಪ್ರಿಯ ಸತೀಶ್, ಜಯಂತಿ ಚಿದಾನಂದ ಹೊಸಮನೆ, ಎಸ್ಎನ್ ಡಿಪಿ ಮಹಿಳಾ ಸಂಘದ ಅಧ್ಯಕ್ಷೆ ಸಿಂಧು, ಸದಸ್ಯೆ ಮಲ್ಲಿಕಾ, ನೆರಿಯ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಸಜೀತಾ, ತೋಟತ್ತಾಡಿ ಧರ್ಮರಕ್ಷಾ ವೇದಿಕೆ ಅಧ್ಯಕ್ಷ ಪ್ರಸಾದ್ ಎಂ., ಕಾರ್ಯದರ್ಶಿ ಗಣೇಶ್ ಉಪಸ್ಥಿತರಿದ್ದರು.
ಮಹಾಪೂಜೆ ಹಾಗೂ ಅನ್ನಸಂತರ್ಪಣೆ ನಂತರ ಶ್ರೀ ಶಾರದಾ ದೇವಿಯ ವೈಭವದ ಶೋಭಾಯಾತ್ರೆ ನಡೆದು ಬೆಂದ್ರಾಳ ನದಿಯಲ್ಲಿ ಜಲಸ್ತಂಭನ ನಡೆಯಿತು.