ಶಿಬಾಜೆ: ಕೈರಂಡ ಮನೆಯವರಿಂದ ಮೊಂಟೆತಡ್ಕ ಶ್ರೀ ದುರ್ಗಾಪರಮೇಶ್ವರಿ ದೇವಾಲಯಕ್ಕೆ 8 ಕೆ.ಜಿ. ತೂಕದ ಬೆಳ್ಳಿ ಮಂಟಪ ಸಮರ್ಪಣೆ

0

ಶಿಬಾಜೆ: ನವರಾತ್ರಿ ಸಂದರ್ಭದಲ್ಲಿ ಶಿಬಾಜೆ ಮೊಂಟೆತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಪೆರ್ಲ ಕೈರಂಡ ನಿವಾಸಿ ಸಂಗೀತಾ ಮತ್ತು ಸನತ್ ಕುಮಾರ್ ದಂಪತಿ ಹಾಗೂ ಮನೆಯವರಿಂದ ಸುಮಾರು 8 ಕೆ.ಜಿ. ತೂಕದ ಬೆಳ್ಳಿಯ ಮಂಟಪವನ್ನು ಕೊಡುಗೆಯಾಗಿ ಸಮರ್ಪಿಸಲಾಯಿತು.

ಈ ಸಂದರ್ಭದಲ್ಲಿ ಅರ್ಚಕರು, ವ್ಯವಸ್ಥಾಪನ ಸಮಿತಿಯ ಪದಾಧಿಕಾರಿಗಳು ಮತ್ತು ಕೈರಂಡ ಮನೆಯವರಾದ ವೈಕುಂಠ ಭಟ್, ಲೀಲಾವತಿ ವೈಕುಂಠ ಭಟ್, ಸಂತೋಷ್ ಕೃಷ್ಣ, ದಿವ್ಯ, ಸೌಮ್ಯ ಮದ್ವರಾಯ್ ಹಾಗೂ ಕುಟುಂಬ ವರ್ಗದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here