ಬೆಳಾಲು: ಇಲ್ಲಿಯ ಅನಂತೋಡಿ ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಶ್ರೀ ಅನಂತೇಶ್ವರ ಭಜನಾ ಮಂಡಳಿಯ ನೇತೃದಲ್ಲಿ ಮಕ್ಕಳ ತಂಡದ ಭಜನಾ ತರಬೇತಿ ಕಾರ್ಯಕ್ರಮ ಅ.4ರಂದು ಉದ್ಘಾಟನೆಗೊಂಡಿತು.ದೇವಸ್ಥಾನದ ಅರ್ಚಕ ಸಂಪತ್ ಕುಮಾರ್ ಉದ್ಘಾಟಿಸಿದರು. ಭಜನಾ ಮಂಡಳಿಯ ಅಧ್ಯಕ್ಷ ನವೀನ್ ಕಂಬಳದಡ್ಡ ಅಧ್ಯಕ್ಷತೆ ವಹಿಸಿದ್ದರು.
ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನೋಟರಿ ವಕೀಲ ಶ್ರೀನಿವಾಸ್ ಗೌಡ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಸನಾತನ ಧಾರ್ಮಿಕ ಭಾವನೆಯನ್ನು ಪ್ರತಿ ಮನೆ- ಮನಗಳಲ್ಲೂ ಕಿರಿಯ ಮಕ್ಕಳಿಗೆ ತಿಳಿಸಿಕೊಡುವ ಜವಾಬ್ದಾರಿ ನಮ್ಮೆಲ್ಲರದ್ದು ಆಗಿದೆ ಎಂದರು.
ಬೆಳಾಲು ಗ್ರಾ.ಪಂ. ಅಧ್ಯಕ್ಷೆ ವಿದ್ಯಾ ಶ್ರೀನಿವಾಸ್ ಮಾತನಾಡುತ್ತ ಧಾರ್ಮಿಕ ಭಾವನೆ ಮಕ್ಕಳಲ್ಲಿ ಮೂಡಿಸಿದಾಗ ಪ್ರತಿ ಮನೆಯಲ್ಲೂ ಭಕ್ತಿ ಭಾವನೆ ಬರಲು ಸಾಧ್ಯವಿದೆ ಎಂದರು. ಆಧುನಿಕ ತಂತ್ರಜ್ಞಾನ, ಸಾಮಾಜಿಕ ಜಾಲತಾಣ ಪರಿಣಾಮದಿಂದ ಸಮಾಜದಲ್ಲಿ ಧಾರ್ಮಿಕತೆಗೆ ಧಕ್ಕೆ ಬರುತ್ತದೆ ಎಂದರು.ವೇದಿಕೆಯಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಉಪಾಧ್ಯಕ್ಷೆ ಮಮತಾ ದಿನೇಶ್ ಪೂಜಾರಿ, ತರಬೇತಿ ಶಿಕ್ಷಕಿ ಸೌಮ್ಯ ರಾವ್, ಶ್ರೀನಿವಾಸ್ ಗೌಡ ಗಣಪನಗುತ್ತು, ಭಜನಾ ಮಂಡಳಿಯ ಹಿರಿಯ ಸದಸ್ಯರಾದ ಜಾರಪ್ಪ ಗೌಡ ಉಪಸ್ಥಿತರಿದ್ದರು.
65 ವಿದ್ಯಾರ್ಥಿಗಳಿಗೆ ಭಜನಾ ತರಬೇತಿಯನ್ನು ಸುಮಾರು 6 ತಿಂಗಳು ಕಾಲ ಪೋಷಕರು ದೇವಸ್ಥಾನ ಸಮಿತಿ ಭಜನಾ ಮಂಡಳಿ ಸದಸ್ಯರ ಸಹಕಾರದಲ್ಲಿ ನಡೆಯಲಿದೆ.ಗಿರೀಶ್ ಕುಮಾರ್ ಮಂಜೊತ್ತು ಕಾರ್ಯಕ್ರಮ ನಿರೂಪಿಸಿದರು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಕಾರ್ಯದರ್ಶಿ ಗ್ರಾಮ ಪಂಚಾಯತ್ ಸದಸ್ಯ ಸತೀಶ್ ಗೌಡ ಎಳ್ಳುಗದ್ದೆ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿದರು. ಭಜನಾ ಮಂಡಳಿಯ ಮಾಜಿ ಅಧ್ಯಕ್ಷ ಜಾರಪ್ಪ ಗೌಡ ವಂದಿಸಿದರು.