ಸೋಣಂದೂರು: ಸೋಣಂದೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ 2024-25ನೇ ಸಾಲಿನ ಪುಂಜಾಲಕಟ್ಟೆ ವಲಯ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವು ಅ.1ರಂದು ನಡೆಯಿತು.
ಕಾರ್ಯಕ್ರಮದಲ್ಲಿ ಶಿಕ್ಷಣ ಸಂಯೋಜಕರು ಹಾಗೂ ಪ್ರತಿಭಾ ಕಾರಂಜಿ ತಾಲೂಕು ನೋಡಲ್ ಅಧಿಕಾರಿಯಾದ ಚೇತನಾಕ್ಷಿ, ಸಮೂಹ ಸಂಪನ್ಮೂಲ ವ್ಯಕ್ತಿ ಚೇತನ, ಕ್ಲಸ್ಟರ್ ನ ಹಿರಿಯ ಶಿಕ್ಷಕರಾದ ಲತಾ ಕೆ, ಶಾಲೆಯ ಪ್ರಭಾರ ಮುಖ್ಯ ಶಿಕ್ಷಕರಾದ ಅನಿತಾ ರೇಷ್ಮಾ ಡಿಸೋಜ, ಶಾಲಾ ಹಿರಿಯ ವಿದ್ಯಾರ್ಥಿಗಳಾದ ರೋಷನ್ ಲೋಬೊ, ಪ್ರಕಾಶ್ ಪ್ರಭು, ಸಂಧ್ಯಾ ಮಹಮ್ಮಾಯಿಕಟ್ಟೆ ಫ್ರೆಂಡ್ಸ್ ಪಣಕಜೆ ಇದರ ಸದಸ್ಯ ಯೋಗಿಶ್
ಮಾಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಪುನೀತ್ ಕುಮಾರ್, ಸದಸ್ಯರಾದ ಬೇಬಿ ಸುಝಾನ್ನ, ದಿನೇಶ್ ಕರ್ಕೆರ, ಬೇಬಿ ಸುವರ್ಣ, ಕ್ಷೇತ್ರ ಶಿಕ್ಷಣಾಧಿಕಾರಿಯವರಾದ ತಾರ ಕೇಸರಿ, ಶಿಕ್ಷಣ ಸಂಯೋಜಕರಾದ ಸಿದ್ದಲಿಂಗ ಸ್ವಾಮಿ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಜಯ, ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು ಕಾರ್ಯಕ್ರಮದಲ್ಲಿ 12 ಶಾಲೆಗಳ ಸುಮಾರು 250 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಹಿರಿಯ ಹಾಗೂ ಕಿರಿಯ ವಿಭಾಗದಲ್ಲಿ ಸ್ಪರ್ಧೆಗಳನ್ನು ನಡೆಸಿ ಬಹುಮಾನ ನೀಡಲಾಯಿತು.ಸಹ ಶಿಕ್ಷಕಿ ರಕ್ಷಾ ಬಿ ನಿರೂಪಿಸಿ, ಅನಿತಾ ರೇಷ್ಮಾ ಸ್ವಾಗತಿಸಿ, ರಶ್ಮಿ ವಂದನಾರ್ಪಣೆ ಗೈದರು. ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಸಹ ಶಿಕ್ಷಕಿ ಸವಿತಾ ಹಾಗೂ ಅಂಗನವಾಡಿ ಶಿಕ್ಷಕಿ ಶಾಂತಿ ಹಾಗೂ ಸಹಾಯಕಿ ಸುನಂದ ಉಪಸ್ಥಿತರಿದ್ದರು.
ಹಳೆ ವಿದ್ಯಾರ್ಥಿಗಳು, ಊರ -ಪರ ಊರ ದಾನಿಗಳು ಸಹಕಾರದಿಂದ ಕಾರ್ಯಕ್ರಮವು ಯಶಶ್ವಿಯಾಗಿ ಜರಗಿತು.