ನಾಡ ಹಬ್ಬ ದಸರಾ ಕ್ರೀಡಾಕೂಟ-2024: ತೇಜಲ್ ಕೆ.ಆರ್ ರಿಗೆ ಬೆಳ್ಳಿ ಪದಕ

0

ಬೆಳ್ತಂಗಡಿ: ಮೈಸೂರಿನಲ್ಲಿ ನಡೆದ ರಾಜ್ಯ ಮಟ್ಟದ ದಸರಾ ಕ್ರೀಡಾಕೂಟ ಸಿಎಂ ಕಪ್-2024 ಇದರಲ್ಲಿ ಪುರುಷರ ವಿಭಾಗದ 110 ಮೀಟರ್ ಹರ್ಡಲ್ಸ್ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮುಂಡಾಜೆ ನಿವಾಸಿ ತೇಜಲ್ ಕೆ.ಆರ್ ಇವರು ಬೆಳ್ಳಿಯ ಪದಕವನ್ನು ಪಡೆದಿರುತ್ತಾರೆ.

ಇತ್ತೀಚಿಗೆ ಮಂಗಳೂರಿನಲ್ಲಿ ನಡೆದ ಮೈಸೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನವನ್ನು ಪಡೆದು ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದರು.ಇವರು ಈವರೆಗೆ ಅನೇಕ ರಾಜ್ಯ ಮಟ್ಟದ ಕ್ರೀಡಾ ಕೂಟದಲ್ಲಿ ಚಿನ್ನದ ಹಾಗೂ ಬೆಳ್ಳಿಯ ಪದಕವನ್ನು ಪಡೆದಿರುತ್ತಾರೆ ಹಾಗೂ ಕಳೆದ ಜೂನ್ ತಿಂಗಳಲ್ಲಿ ನಡೆದ ರಾಜ್ಯಮಟ್ಟದ ಯೂತ್ ಮೀಟ್ ನಲ್ಲಿ ಕೂಡ ಚಿನ್ನದ ಪದಕವನ್ನು ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆ ಆಗಿದ್ದರು.

ಇವರು ಮುಂಡಾಜೆ ನಿವಾಸಿಯಾದ ರಾಜೇಶ್ ಕೆ.ವಿ ಹಾಗೂ ಜಿನ್ಸಿ ರಾಜೇಶ್ ಇವರ ಪುತ್ರನಾಗಿರುತ್ತಾರೆ.

ಇವರು ಆಳ್ವಾಸ್ ಕಾಲೇಜಿನ ಕ್ರೀಡಾ ವಿದ್ಯಾರ್ಥಿ ಆಗಿದ್ದು ತರಬೇತುದಾರರಾದ ಶಾಂತರಾಮ್ ಇವರಿಂದ ತರಬೇತಿಯನ್ನು ಪಡೆಯುತ್ತಿದ್ದಾರೆ.

LEAVE A REPLY

Please enter your comment!
Please enter your name here