ಕಕ್ಯಪದವು: ಅ.3ರಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಬಂಟ್ವಾಳ ಮತ್ತು ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ಸಿದ್ದಕಟ್ಟೆ ಇವರ ಸಂಯುಕ್ತ ಆಶ್ರಯದಲ್ಲಿ ವಾಮದಪದವು ವಲಯ ಮಟ್ಟದ ಪ್ರಾಥಮಿಕ ವಿಭಾಗದ ಶಾಲೆಗಳ 2024-25ರ ಕ್ರೀಡಾಕೂಟವು ನಡೆಯಿತು.
ವಾಮದಪದವು ವಲಯ ಮಟ್ಟದ ಕ್ರೀಡಾಕೂಟದಲ್ಲಿ ಎಲ್ ಸಿ ಆರ್ ಇಂಡಿಯನ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಭಾಗವಹಿಸಿ ಬಹುಮಾನವನ್ನು ಪಡೆದಿರುತ್ತಾರೆ. 7ನೇ ತರಗತಿಯ ಚಿರಾಗ್ ಸಾಲಿಯನ್ 100 ಮೀಟರ್ ಓಟ ಹಾಗೂ ಎತ್ತರ ಜಿಗಿತದಲ್ಲಿ ಪ್ರಥಮ ಸ್ಥಾನವನ್ನು, ಚಕ್ರ ಎಸೆತದಲ್ಲಿ 7ನೇ ತರಗತಿಯ ಆದ್ಯಾ ಜಿ ಕೆ ದ್ವಿತೀಯ ಸ್ಥಾನವನ್ನು ಮತ್ತು ಹನ್ಸುಜ ತೃತೀಯ ಸ್ಥಾನವನ್ನು ಹಾಗೂ 6ನೇ ತರಗತಿಯ ಅಪರ್ಣಾ ಎ ಶೆಟ್ಟಿ 400 ಮೀಟರ್ ಓಟದಲ್ಲಿ ತೃತೀಯ ಸ್ಥಾನವನ್ನು ಗಳಿಸಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
p>