ಬದ್ಯಾರ್ ಫಾದರ್ ಎಲ್.ಎಂ.ಪಿಂಟೋ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ

0

ಬೆಳ್ತಂಗಡಿ: ಬದ್ಯಾರ್‌ನ ಫಾದರ್ ಎಲ್.ಎಂ.ಪಿಂಟೋ ಆಸ್ಪತ್ರೆ ಹಾಗೂ ಕಂಕನಾಡಿಯ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆ ವತಿಯಿಂದ ಫಾದರ್ ಎಲ್.ಎಂ.ಪಿಂಟೋ ಆಸ್ಪತ್ರೆಯಲ್ಲಿ ಅ.2ರಂದು ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ ನಡೆಯಿತು.ಬದ್ಯಾರ್ ಫಾದರ್ ಎಲ್.ಎಂ.ಪಿಂಟೋ ಆಸ್ಪತ್ರೆಯ ಆಡಳಿತಾಧಿಕಾರಿ ವಂ.ಫಾ.ರೋಶನ್ ಕ್ರಾಸ್ತಾ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಯಾಗಿದ್ದ ಭಾರತೀಯ ಕಥೋಲಿಕ್ ಯುವ ಸಂಚಲನ ಬೆಳ್ತಂಗಡಿ ವಲಯದ ನಿರ್ದೇಶಕ ವಂ.ಫಾ.ಪ್ರವೀಣ್ ಡಿಸೋಜ ಮಾತನಾಡಿ, ರಕ್ತದಾನಕ್ಕೆ ಮುಖ್ಯ ಕಾರಣ ಜೀವ ಉಳಿಸುವುದು ಅಥವಾ ಜೀವವನ್ನು ಬೆಳೆಸುವುದು. ರಕ್ತದಾನ ಮಾಡಲು ಯಾರೂ ಎರಡು ಬಾರಿ ಯೋಚಿಸಬಾರದು. ಒಂದು ಹನಿ ನೀರಿನಿಂದ ನಾವು ಜೀವವನ್ನು ಕಾಪಾಡುವಂತೆ ಒಂದು ಹನಿ ರಕ್ತದಿಂದ ಜೀವವನ್ನು ಉಳಿಸಬಹುದು. ರಕ್ತದಾನ ಮಾಡುವುದರಿಂದ ದೈಹಿಕ ಆರೋಗ್ಯ ಪ್ರಾಪ್ತಿಯಾಗುತ್ತದೆ ಎಂದು ಹೇಳಿದರು.

ಬದ್ಯಾರ್ ಆಸ್ಪತ್ರೆಯ ಸಹಾಯಕ ನಿರ್ವಾಹಕ ಜ್ಯೋತ್ಸ್ನಾ, ತುಂಬೆಯ ಫಾದರ್ ಮುಲ್ಲರ್ ಆಸ್ಪತ್ರೆಯ ಮಕ್ಕಳ ತಜ್ಞರಾದ ಡಾ.ಸೌಮ್ಯಾ, ಬದ್ಯಾರ್ ಆಸ್ಪತ್ರೆಯ ಹಿರಿಯ ತಜ್ಞ ವೈದ್ಯ ಡೆಜಲ್ ನೊರೊನ್ಹ, ಸಂತ ರೆಫಲರ್ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ವೆಲಿಯಾನ್ ಕ್ರಾಸ್ತಾ, ಭಾರತೀಯ ಕಥೋಲಿಕ್ ಯುವ ಸಂಚಲನ ಬೆಳ್ತಂಗಡಿ ವಲಯದ ಅಧ್ಯಕ್ಷ ಸುಪ್ರೀತ್ ಫರ್ನಾಂಡಿಸ್ ಹಾಗೂ ಐ.ಸಿ.ವೈ.ಎಂ ಬದ್ಯಾರ್ ಘಟಕದ ಅಧ್ಯಕ್ಷೆ ವಿನುತಾ ಫೆರ್ನಾಂಡಿಸ್, ಸಂತ ರಾಫೆಲ್ ಹೆಲ್ತ್ ಕಮಿಷನ್ ಸಂಯೋಜಕರಾದ ಬಬಿತಾ ಮೋರಾಸ್ ಉಪಸ್ಥಿತರಿದ್ದರು.

ಆಸ್ಪತ್ರೆಯ ಸಿಬ್ಬಂದಿ ಪ್ರಾರ್ಥನೆ ಮಾಡಿದರು. ಬದ್ಯಾರ್ ಆಸ್ಪತ್ರೆಯ ವೈದ್ಯ ಡಾ.ಜೋಶನ್ ಡಿಸೋಜ ಸ್ವಾಗತಿಸಿ, ಬಬಿತಾ ಮೋರಾಸ್ ವಂದಿಸಿದರು.

p>

LEAVE A REPLY

Please enter your comment!
Please enter your name here