


ಲಾಯಿಲ: ಓಡದಕರಿಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಅ.3ರಿಂದ 12ರವರೆಗೆ ನವರಾತ್ರಿ ಪೂಜೆ ವಿಜೃಂಭಣೆಯಿಂದ ನಡೆಯಲಿದೆ. 3ರಂದು ಬೆಳಗ್ಗೆ ತೋರಣ ಮುಹೂರ್ತ, ತೆನೆ ಮುಹೂರ್ತ, ಮಹಾಪೂಜೆ, ಪ್ರಸಾದ ವಿತರಣೆ ಜರುಗಲಿದೆ. ನವರಾತ್ರಿಯ ಎಲ್ಲ ದಿನಗಳಲ್ಲಿ ಬೆಳಗ್ಗೆ 8ಕ್ಕೆ ನಿತ್ಯ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ, ರಾತ್ರಿ 7ರಿಂದ ವಿವಿಧ ಆಹ್ವಾನಿತ ಭಜನಾ ತಂಡಗಳಿಂದ ಭಜನೆ, ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.