ಬಳಂಜ: ಅಟ್ಲಾಜೆ ಶಾಲೆಯಲ್ಲಿ ತಾಯಿಗೊಂದು ಗಿಡ ನೆಡುವ ಕಾರ್ಯಕ್ರಮ

0

ಬಳಂಜ: ದ.ಕ.ಜಿ.ಪಂ.ಕಿ.ಪ್ರಾ ಶಾಲೆ ಅಟ್ಲಾಜೆಯಲ್ಲಿ ಸೆ.30ರಂದು ತಾಯಿಗೊಂದು ಗಿಡ ನೆಡುವ ಕಾರ್ಯಕ್ರಮವು ಜರುಗಿತು.ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ತಮ್ಮ ಪೋಷಕರೊಂದಿಗೆ ತುಂಬಾ ಸಂತೋಷದಿಂದ ಪಾಲ್ಗೊಂಡರು. ಸರಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮಗಳಲ್ಲಿ ಪೋಷಕರೊಂದಿಗೆ ಗಿಡ ನೆಡುವ ಕಾರ್ಯಕ್ರಮವು ಪರಿಸರ ಸಂರಕ್ಷಣೆಯ ಹಿತದೃಷ್ಟಿಯಲ್ಲಿ ಬಹಳ ಮುಖ್ಯವಾಗಿದೆ.ಮಕ್ಕಳು ಹಣ್ಣಿನ ಹಾಗೂ ತರಕಾರಿ ಗಿಡಗಳನ್ನು ಮತ್ತು ತೆಂಗಿನಕಾಯಿ ಸಸಿಯನ್ನು ನೆಡುವುದರ ಮೂಲಕ ಸಂಭ್ರಮಿಸಿದರು.

ಮಕ್ಕಳು ತಾವು ನೆಟ್ಟ ಗಿಡಕ್ಕೆ ತಮ್ಮ ತಮ್ಮ ತಾಯಂದಿರ ಹೆಸರನ್ನು ಇಟ್ಟು ಆ ಗಿಡದ ಸಂಪೂರ್ಣ ಜವಾಬ್ದಾರಿಯನ್ನು ತಾವೇ ವಹಿಸಿಕೊಂಡರು. ಕಾರ್ಯಕ್ರಮದಲ್ಲಿ ಶಾಲಾ
ಎಸ್ ಡಿ ಎಂಸಿ ಅಧ್ಯಕ್ಷರು ಪೋಷಕರು ಮುಖ್ಯ ಶಿಕ್ಷಕರು ಸಹ ಶಿಕ್ಷಕರು ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪಾಲ್ಗೊಂಡರು.

LEAVE A REPLY

Please enter your comment!
Please enter your name here