ಐಲೇಸಾದ ವಿಶೇಷ ಕೂಜಿನ ಪಾಟು ಹಾಡು ಬಿಡುಗಡೆ

0

ಬೆಳ್ತಂಗಡಿ: ತುಳುವಿನ ಆದಿಮೂಲ ಕೊರಗ ಭಾಷೆಯಲ್ಲಿ ಕೂಜಿ ಅಂದರೆ ಹೆಣ್ಣು ಮಗಳು. ಹೆಣ್ಣು ಮಗು ಹುಟ್ಟಿದರೆ ಕುಲ ಅಭಿವೃದ್ಧಿಯಾಗುವುದು ಮತ್ತು ಜೀವನ ಸುಗಮವಾಗುವುದು ಎನ್ನುವುದು ಕೊರಗರ ಮೂಲ ನಂಬಿಕೆ. ಹೆಣ್ಣು ಮಗುವಿನ ಜನನವನ್ನು ಅವರು ಹಾಡಿ ನಲಿಯುವ ಸಂಭ್ರಮವನ್ನು ಸಾಹಿತಿ ಪಾಂಗಾಳ ಬಾಬು ಕೊರಗ ಅದ್ಭುತವಾಗಿ ಕಟ್ಟಿ ಕೊಟ್ಟಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ವಿ. ಮನೋಹರ್ ಬುಡಕಟ್ಟು ಸೊಗಡಿನ ಸಂಗೀತವನ್ನು ರಚಿಸಿದ್ದಾರೆ. ಯುವ ಗಾಯಕ ಚೇತನ್ ಖುಷಿ ಗಟ್ಟಿ ಧ್ವನಿಯಲ್ಲಿ ಸರಾಗವಾಗಿ ಹಾಡಿದ್ದಾರೆ. ಎರಡು ಕೊರಗ ಕಲಾ ತಂಡಗಳು ತಾಳಮಯವಾಗಿ, ಮುಗ್ಧವಾಗಿ ಹೆಜ್ಜೆ ಹಾಕಿದ್ದಾರೆ.

ಬೆಂಗಳೂರಿನ Schneider Electric ಸಂಸ್ಥೆಯ ಕಾನೂನು ಅಧೀಕ್ಷಕ ನಿಟ್ಟೆ ಕಿಶೋರ್ ಶೆಟ್ಟಿ ಸಹಕಾರದಲ್ಲಿ ಐಲೇಸಾ ನಿರ್ಮಾಣವಾದ ಈ ಹಾಡನ್ನು ಸೆ.28ರಂದು ಕಾರ್ಕಳ ನಿಟ್ಟೆ ವಿಶ್ವ ವಿದ್ಯಾಲಯದಲ್ಲಿ
ನಿಕಟಪೂರ್ವ ಉಪಕುಲಪತಿ ಡಾ. ಸತೀಶ್ ಕುಮಾರ್ ಭಂಢಾರಿಯವರು ಧ್ವನಿಸುರುಳಿಯನ್ನು ಬಿಡುಗಡೆಗೊಳಿಸಿದರು.

p>

LEAVE A REPLY

Please enter your comment!
Please enter your name here