ಬೆಳ್ತಂಗಡಿ: ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಮಹಿಳಾ ಕಾಂಗ್ರೆಸ್ ನಿಂದ ಮಹಿಳಾ ಸದಸ್ಯತ್ವ ನೋಂದಣಿ ಅಭಿಯಾನ ಕಾರ್ಯಕ್ರಮ

0

ಬೆಳ್ತಂಗಡಿ: ಅಖಿಲ ಭಾರತ ರಾಷ್ಟ್ರೀಯ ಮಹಿಳಾ ಕಾಂಗ್ರೆಸ್ ನ ಸೂಚನೆಯಂತೆ ಬೆಳ್ತಂಗಡಿ ವಿದಾನಸಭಾ ಕ್ಷೇತ್ರದ ಮಹಿಳಾ ಸದಸ್ಯತ್ವ ನೋಂದಾವಣಾ ಅಭಿಯಾನ ಕಾರ್ಯಕ್ರಮವು ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಬ್ಲಾಕ್ ಕಾಂಗ್ರೆಸ್ ನಗರ ಮಹಿಳಾ ಘಟಕದ ಅಧ್ಯಕಕ್ಷೆ ವಂದನಾ ಭಂಡಾರಿ ಅಂಡಿಂಜೆಯವರ ಅಧ್ಯಕ್ಷತೆಯಲ್ಲಿ ಜರಗಿತು.

ಸದಸ್ಯತ್ವ ನೋಂದಾವಣೆ ಬಗ್ಗೆ ಸಭೆಯಲ್ಲಿ ಸವಿವರವಾಗಿ ತಿಳಿಸಿದರು.ಮುಂದಿನ ದಿನಗಳಲ್ಲಿ ಮನೆ ಮನೆ ಭೇಟಿ ಮಾಡಿ ಮಹಿಳಾ ಸದಸ್ಯತ್ವ ನೋಂದಾವಣೆಯನ್ನು ಮಹಿಳಾ ಕಾಂಗ್ರೆಸ್ ವತಿಯಿಂದ ನಡೆಸಲು ತೀರ್ಮಾನಿಸಲಾಯಿತು.

ಸಭೆಯಲ್ಲಿ ಮಹಿಳಾ ಸದಸ್ಯರನ್ನು ಸದಸ್ಯತ್ವ ನೋಂದಾವಣೆ ಮಾಡಲಾಯಿತು.

ಈ ಸಭೆಯಲ್ಲಿ ಮಹಿಳಾ ಕಾಂಗ್ರೆಸ್ ನ ಉಷಾ ಶರತ್, ಸೌಮ್ಯ ಲಾಯಿಲಾ, ಮರೀಟಾ ಪಿಂಟೋ, ಸವಿತ ಸುಲ್ಕೇರಿ, ವಸಂತಿ ಜೆ ಆಚಾರಿ, ಜಯಶೀಲ, ಜಯಲಕ್ಷ್ಮಿ, ಮಧುರಾ, ಸುಪ್ರಿಯಾ ಮತ್ತು ಇತರ ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here