ಮುಂಡಾಜೆ ಬಂಟರ ಗ್ರಾಮ ಸಮಿತಿಯ ವಾರ್ಷಿಕ ಮಹಾಸಭೆ- ಜಾತಿ ಸಂಘಟನೆಗಳ ಒಗ್ಗಟ್ಟಿನಿಂದ ಹಿಂದುತ್ವವನ್ನು ಬಡಿದೆಬ್ಬಿಸಿ: ಅಧ್ಯಕ್ಷ ಜಯಂತ ಶೆಟ್ಟಿ ಭಂಡಾರಿಗುಡ್ಡೆ

0

ಮುಂಡಾಜೆ: ಬಂಟರ ಗ್ರಾಮ ಸಮಿತಿಯ ವಾರ್ಷಿಕ ಮಹಾಸಭೆಯು ಸೆ.29ರಂದು ಯುವಕ ಮಂಡಲ ಮುಂಡಾಜೆ ಇದರ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಬೆಳ್ತಂಗಡಿ ಬಂಟರ ಸಂಘದ ಅಧ್ಯಕ್ಷ ಜಯಂತ ಶೆಟ್ಟಿ ಭಂಡಾರಿಗುಡ್ಡೆ ಇವರು ಮಾತನಾಡಿ ಜಾತಿ ಸಂಘಟನೆಗಳು ಒಟ್ಟಾಗಬೇಕು, ಆ ಮೂಲಕ ಹಿಂದೂ ಧರ್ಮವನ್ನು ಬಡಿದೆಬ್ಬಿಸಿ ನಾವೆಲ್ಲ ಒಂದಾಗಿ ಬದುಕುವುದನ್ನು ಕಲಿಯಬೇಕು ಎಂಬುದಾಗಿ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಬಂಟರ ಸಂಘದ ಎಲ್ಲ ಪದಾಧಿಕಾರಿಗಳು ಹಾಗೂ ಮಾಜಿ ಅಧ್ಯಕ್ಷರಾದ ಜಯರಾಮ ಶೆಟ್ಟಿ ಮುಂಡಾಡಿಗುತ್ತು ಇವರು ಉಪಸ್ಥಿತರಿದ್ದು, ಸಂಘದ ಚಟುವಟಿಕೆಗಳಿಗೆ ಶುಭ ಕೋರಿದರು.

ಉಜಿರೆ ವಲಯ ಬಂಟರ ಸಂಘದ ಅಧ್ಯಕ್ಷರಾದ ವನಿತಾ ವಿ ರೈ , ಪೂರ್ವ ಅಧ್ಯಕ್ಷರುಗಳು ಹಾಗೂ ಎಲ್ಲಾ ಪದಾಧಿಕಾರಿಗಳು, ಮುಂಡಾಜೆ ಗ್ರಾಮ ಸಮಿತಿಯ ಮಾಜಿ ಅಧ್ಯಕ್ಷರುಗಳು, ಪದಾಧಿಕಾರಿಗಳು ಉಪಸ್ಥಿತರಿದ್ದರು. ಮುಂಡಾಜೆ ಗ್ರಾಮ ಸಮಿತಿಯ ನೂತನ ಅಧ್ಯಕ್ಷರಾಗಿ ಪುರುಷೋತ್ತಮ ಶೆಟ್ಟಿ ಅಗರಿ ಇವರು ಪುನರಾಯ್ಕೆಗೊಂಡರು. ಕಾರ್ಯದರ್ಶಿಯಾಗಿ ಪ್ರದೀಪ್ ಶೆಟ್ಟಿ ನಾಗಂಡ ಮತ್ತು ಕೋಶಾಧಿಕಾರಿಯಾಗಿ ಮಧು ಶೆಟ್ಟಿ ಹುರ್ತಾಜೆ ಮತ್ತು ಇತರ ಪದಾಧಿಕಾರಿಗಳ ಆಯ್ಕೆ ನಡೆಯಿತು.

ವೇದಿಕೆಯಲ್ಲಿದ್ದ ಸಂಜೀವ ಶೆಟ್ಟಿ ಕುಂಟಿನಿ, ಸುರೇಶ್ ಶೆಟ್ಟಿ ಲಾಯಿಲ, ಉಮೇಶ್ ಶೆಟ್ಟಿ ದುರ್ಗಾ ನಿಲಯ ಉಜಿರೆ, ವೆಂಕಟರಮಣ ಶೆಟ್ಟಿ ಕಲ್ಮಂಜ, ಸೀತಾರಾಮ ಶೆಟ್ಟಿ ಕೆಂಬಾರ್ಜೆ, ಜಯರಾಮ ಶೆಟ್ಟಿ ಕೆಂಬರ್ಜೆ, ಕಿರಣ್ ಕುಮಾರ್ ಶೆಟ್ಟಿ, ರಾಧಾಕೃಷ್ಣ ಶೆಟ್ಟಿ ಕುಂಟಿನಿ, ಗೌರವಾಧ್ಯಕ್ಷ ರಾಮಣ್ಣ ಶೆಟ್ಟಿ ಅಗರಿ, ಸಂಚಾಲಕ ವಿಶ್ವನಾಥ ಶೆಟ್ಟಿ ಮುಂಡ್ರುಪಾಡಿ ಇವರುಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುರುಷೋತ್ತಮ ಶೆಟ್ಟಿ ಅಗರಿ ವಹಿಸಿಕೊಂಡಿದ್ದರು. ಕಾರ್ಯದರ್ಶಿ ವಿಜಯಕುಮಾರ್ ರೈ ಇವರು ಸ್ವಾಗತಿಸಿ, ನಾರಾಯಣ ಶೆಟ್ಟಿ ಮಂಜುಶ್ರೀ ನಗರ ಪ್ರಾರ್ಥಿಸಿದರು. ನವೀತ್ ಶೆಟ್ಟಿ ನಿರೂಪಿಸಿ, ಧನ್ಯವಾದಿಸಿದರು.

p>

LEAVE A REPLY

Please enter your comment!
Please enter your name here