ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಧರ್ಮಸ್ಥಳ ವಲಯದ ಕಳೆಂಜ ಬಿ ಕಾರ್ಯಕ್ಷೇತ್ರದ ಸ್ಪಂದನ ಜ್ಞಾನವಿಕಾಸ ಕೇಂದ್ರದ ವಾರ್ಷಿಕೋತ್ಸವ

0

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಧರ್ಮಸ್ಥಳ ವಲಯದ ಕಳೆಂಜ ಬಿ ಕಾರ್ಯಕ್ಷೇತ್ರದ ಸ್ಪಂದನ ಜ್ಞಾನವಿಕಾಸ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮ ಕಳೆಂಜ ಶ್ರೀ ಸದಾಶಿವೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಸದಾಶಿವೇಶ್ವರ ದೇವಸ್ಥಾನದ ಆಡಳಿತ ಕಮಿಟಿ ಅಧ್ಯಕ್ಷ ಶ್ರೀಧರ್ ರಾವ್ ರವರು ನೆರವೇರಿಸಿ, ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಗ್ರಾಮದ ಜನರು ಅಭಿವೃದ್ಧಿಯನ್ನು ಹೊಂದಿದ್ದು ಪ್ರತಿಯೊಂದು ದೇವಸ್ಥಾನಗಳ ಅಬಿವೃದ್ದಿ ಕೂಡ ಕ್ಷೇತ್ರದ ಸಹಾಯದಿಂದಲೇ ಆಗುತ್ತಿದೆ ಎಂದರು.ಗೌರವಾನ್ವಿತ ಯೋಜನಾಧಿಕಾರಿ ಸುರೇಂದ್ರರವರು ಮಾತನಾಡುತ್ತಾ ಜ್ಞಾನವಿಕಾಸ ಕೇಂದ್ರದ ಮೂಲಕ ಮಹಿಳೆಯರ ಅಭಿವೃದ್ಧಿ ಶಿಸ್ತು ಬದ್ಧ ಜೀವನ ಶೈಲಿ, ವಿವಿಧ ಸಂಪನ್ಮೂಲ ವ್ಯಕ್ತಿಯಿಂದ ಮಾಹಿತಿ ನೀಡುವುದರೊಂದಿಗೆ ಪ್ರತಿಭೆಗಳನ್ನ ಅನಾವರಣಗೊಳಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ ಜ್ಞಾನ ವಿಕಾಸ ಕಾರ್ಯಕ್ರಮದ ಮೂಲಕ ಮಹಿಳೆಯರು ಪ್ರಬುದ್ಧತೆಯನ್ನು ಹೊಂದಿದ್ದು ಪ್ರತೀ ತಿಂಗಳು ಉತ್ತಮ ಮಾಹಿತಿಯೊಂದಿಗೆ ತಮ್ಮ ಪ್ರತಿಭೆಗಳನ್ನು ಹೊರಹಾಕಲು ಒಂದು ವೇದಿಕೆಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಒಕ್ಕೂಟ ಅಧ್ಯಕ್ಷ ಬಾಲಕೃಷ್ಣ ಗೌಡ, ಸವಿತಾ, ಭಜನಾ ಮಂಡಳಿಯ ಅಧ್ಯಕ್ಷ ದಿನೇಶ್, ಹರೀಶ್ ರವರು ಉಪಸ್ಟಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜ್ಞಾನ ವಿಕಾಸ ಕೇಂದ್ರದ ಸದಸ್ಯೆ ಡೀಕಮ್ಮ ವಹಿಸಿದ್ದರು.ಜ್ಞಾನ ವಿಕಾಸ ಕೇಂದ್ರದ ಸದಸ್ಯೆ ಪುಷ್ಪರವರು ಅನಿಸಿಕೆ ವ್ಯಕ್ತಪಡಿಸಿದರು.

ಸಂಯೋಜಕಿ ಗೀತಾ ವರದಿ ವಾಚಿಸಿಸಿದರು.ಜ್ಞಾನ ವಿಕಾಸ ಸಮನ್ವಯಾಧಿಕಾರಿ ಮಧುರ ವಸಂತ್ ನಿರೂಪಿಸಿ, ಸುಶೀಲ ಸ್ವಾಗತಿಸಿ, ಮೇಲ್ವಿಚಾರಕ ರವೀಂದ್ರ ಬಿ ಧನ್ಯವಾದವಿತ್ತರು.

ಕಾರ್ಯಕ್ರಮದಲ್ಲಿ ಸದಸ್ಯರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ವಿತರಿಸಲಾಯಿತು. ಕೇಂದ್ರದ ಸದಸ್ಯರು ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು.

p>

LEAVE A REPLY

Please enter your comment!
Please enter your name here