ಗುರುವಾಯನಕೆರೆ: ಎಕ್ಸೆಲ್ ಪಿಯು ಕಾಲೇಜಿಗೆ ಪಿನಾಕಲ್ ನಲ್ಲಿ ಚಾಂಪಿಯನ್ ಶಿಪ್

0

ಗುರುವಾಯನಕೆರೆ: ಎಕ್ಸೆಲ್ ಪಿಯು ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಸೆ.28ರಂದು ಉಜಿರೆ ಶ್ರೀ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಪದವಿ ಕಾಲೇಜಿನಲ್ಲಿ ನಡೆದ “ಪಿನಾಕಲ್ 2024” ಸ್ಪರ್ಧೆಯಲ್ಲಿ ಪಾಲ್ಗೊಂಡು, ಸಮಗ್ರ ಚಾಂಪಿಯನ್‌ಶಿಪ್‌ ವಿಜೇತರಾಗಿದ್ದಾರೆ.

ಪ್ರಥಮ ಸ್ಥಾನ ವಿಜೇತರಾದ ವಿಭಾಗಗಳು: ರಸ ಪ್ರಶ್ನೆ ಸ್ಪರ್ಧೆ- ಶ್ರೀವತ್ಸ, ಋತ್ವಿಕ್, ಮಾರ್ಕೆಟಿಂಗ್ ಸ್ಪರ್ಧೆ- ನಂದನ್, ಅಭಿನವ, ಅನಿಶಾ, ಮಿಸ್ಬಾ ಅಂಜುಮ್.

ದ್ವಿತೀಯ ಸ್ಥಾನ ವಿಜೇತರಾದ ವಿಭಾಗಗಳು: ಇವೆಂಟ್ ಮ್ಯಾನೇಜ್‌ಮೆಂಟ್- ತನಯ್, ಭವೀಶ್, ನೃತ್ಯ ಸ್ಪರ್ಧೆ- ದಿಯಾ, ವಿದ್ಯಾ ಗೌರಿ, ಅಶಿತಾ, ದರ್ಶಿನಿ.

ಪ್ರಾಂಶುಪಾಲ ಡಾ.ನವೀನ್ ಕುಮಾರ ಮರಿಕೆ ಅವರು, ಈ ರೀತಿಯ ಮ್ಯಾನೇಜ್‌ಮೆಂಟ್ ಫೆಸ್ಟ್‌ಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ಅಭಿವೃದ್ಧಿಗೆ ಸಹಕಾರಿ ಎಂದು ತಿಳಿಸಿದರು.

ವಾಣಿಜ್ಯ ವಿಭಾಗದ ಡೀನ್‌ ಸಂತೋಷ್ ಕೆಕೆ ಹಾಗೂ ವಿಭಾಗ ಮುಖ್ಯಸ್ಥ ಪ್ರಸನ್ನ ಭೋಜ ಅವರ ಮಾರ್ಗದರ್ಶನದಲ್ಲಿ, ವಾಣಿಜ್ಯ ವಿಭಾಗದ ಉಪನ್ಯಾಸಕರು ವಿದ್ಯಾರ್ಥಿಗಳನ್ನು ತರಬೇತಿಗೊಳಿಸಿದ್ದರು.

LEAVE A REPLY

Please enter your comment!
Please enter your name here