ವಿಧಾನಪರಿಷತ್ ಉಪಚುನಾವಣೆಯ ನೀತಿ ಸಂಹಿತೆ ಅವಧಿ ಮುಗಿದ ಬಳಿಕ ಗ್ರಾಮ ಪಂಚಾಯತ್‌ಗಳಲ್ಲಿ ಸಾರ್ವಜನಿಕ ಸಭೆ ನಡೆಸಲು ಸುದ್ದಿ ಬಳಗ ನಿರ್ಧಾರ

0

೩೯ ವರ್ಷಗಳಿಂದ ಬೆಳ್ತಂಗಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸುದ್ದಿ ಬಿಡುಗಡೆ ತಾಲೂಕಿನ ಅತ್ಯಂತ ಪ್ರಸಾರದ ಪತ್ರಿಕೆಯಾಗಿದ್ದರೂ ಹಿಂದಿನಿಂದಲೂ ಬರುತ್ತಿದ್ದ ಕೆಲವು ಗ್ರಾಮ ಪಂಚಾಯತ್‌ನ ಪ್ರಕಟಣೆಗಳು, ಜಾಹೀರಾತುಗಳು ಕಳೆದ ಒಂದೂವರೆ ವರ್ಷಗಳಿಂದ ಬಾರದೆ ಇರುವ ಕಾರಣದ ಬಗ್ಗೆ ಮತ್ತು ಸುದ್ದಿ ಬಿಡುಗಡೆ ಪತ್ರಿಕೆಯ ಮೇಲೆ ಗ್ರಾಮದ ಜನರಿಗೆ ಅಥವಾ ಆಡಳಿತ ಮಂಡಳಿಗೆ ಏನಾದರೂ ಅಸಮಾಧಾನ ಇದ್ದರೆ ಅದನ್ನು ಬಹಿರಂಗವಾಗಿ ಚರ್ಚಿಸಿ ಸರಿಪಡಿಸುವ ಕುರಿತು ಗ್ರಾಮ ಪಂಚಾಯತ್‌ಗಳಲ್ಲಿ ನಡೆಸಲು ನಿರ್ಧರಿಸಲಾಗಿರುವ ಸಾರ್ವಜನಿಕ ಸಭೆಯನ್ನು ವಿಧಾನ ಪರಿಷತ್‌ನ ಉಪಚುನಾವಣೆಯ ನೀತಿ ಸಂಹಿತೆ ಅವಧಿ ಮುಗಿದ ನಂತರ ಏರ್ಪಡಿಸಲು ನಿರ್ಧರಿಸಲಾಗಿದೆ.
ಬೆಳ್ತಂಗಡಿ ತಾಲೂಕಿನಲ್ಲಿ ಕಳೆದ ೩೯ ವರ್ಷಗಳಿಂದ ಸುದ್ದಿ ಬಿಡುಗಡೆ ಪತ್ರಿಕೆ ಜನರ ಬೆಂಬಲದಿಂದ ಉತ್ತಮವಾಗಿ ನಡೆಯುತ್ತಾ ಬಂದಿದೆ. ಬೆಳ್ತಂಗಡಿ ತಾಲೂಕಿನ ಎಲ್ಲಾ ಗ್ರಾಮಗಳ ಸುದ್ದಿಗಳು ನಮಗೆ ಬಹಳ ಮುಖ್ಯವಾಗಿದೆ. ಸುದ್ದಿ ಬಿಡುಗಡೆ ಪತ್ರಿಕೆ ತಾಲೂಕಿನಲ್ಲಿ ಅತ್ಯಂತ ಪ್ರಸಾರ ಹೊಂದಿದೆ. ಉಳಿದ ಪತ್ರಿಕೆಗಿಂತ ೧೦ ಪಟ್ಟು ಹೆಚ್ಚು ಪ್ರಸಾರ ಹೊಂದಿದೆ. ತಾಲೂಕಿನ ಹೆಚ್ಚಿನ ಮನೆಗಳನ್ನು ನಮ್ಮ ಪತ್ರಿಕೆ ತಲುಪುತ್ತಿದೆ. ಗ್ರಾಮೀಣ ಪತ್ರಿಕೋದ್ಯಮ ಮತ್ತು ಪಾಸಿಟಿವ್ ಪತ್ರಿಕೋದ್ಯಮ ಮೂಲಕ ಜನರ ಬೆಂಬಲ ಪಡೆದಿರುವ ಸುದ್ದಿ ಬಿಡುಗಡೆ ಪತ್ರಿಕೆ ಮಂಗಳೂರು, ಪುತ್ತೂರು, ಸುಳ್ಯ ಮತ್ತು ಬೆಂಗಳೂರಿನಲ್ಲಿಯೂ ದೊರಕುತ್ತದೆ. ಅಂತರ್ಜಾಲದಲ್ಲಿ ಇ-ಪೇಪರ್ ಆಗಿ ಜಗತ್ತಿನಾದ್ಯಂತ ಲಕ್ಷಾಂತರ ಜನರಿಗೆ ತಲುಪುತ್ತಿದೆ. ರಾಜಕೀಯ ಪಕ್ಷಗಳು, ಜಾತಿ ಸಂಘಟನೆಗಳು ಸೇರಿದಂತೆ ಎಲ್ಲಾ ಸಂಘ ಸಂಸ್ಥೆಗಳು ಸುದ್ದಿ ಬಿಡುಗಡೆ ಪತ್ರಿಕೆಯನ್ನು ಪ್ರೋತ್ಸಾಹಿಸುತ್ತಾ ಬಂದಿದೆ. ಆದರೂ ಕೆಲವು ಗ್ರಾಮ ಪಂಚಾಯತ್‌ಗಳು ಸುದ್ದಿ ಬಿಡುಗಡೆ ಪತ್ರಿಕೆಗೆ ಜಾಹಿರಾತು, ಪ್ರಕಟಣೆ, ಮಾಹಿತಿ ದೊರಕದಂತೆ ಮಾಡುತ್ತಿರುವುದು ಯಾಕೆ ಎಂದು ತಿಳಿದುಕೊಳ್ಳುವುದು ನಮ್ಮ ಉzಶವಾಗಿದೆ.
ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ಮಾತ್ರ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್ ಸಹಿತ ತಾಲೂಕು ಮಟ್ಟದ ಅಧಿಕಾರಿಗಳ ಕಾರ್ಯಕ್ರಮದ ವಿವರ ಹಾಗೂ ಜನತೆಗೆ ಬೇಕಾದ ಉಪಯುಕ್ತ ಸುದ್ದಿಗಳು ಪ್ರಕಟವಾಗುತ್ತಿದೆ. ಗ್ರಾಮೀಣ ಸುದ್ದಿಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿzವೆ. ೩೮ ವರ್ಷಗಳ ಹಿಂದಿನಿಂದಲೂ ಪ್ರತೀ ಗ್ರಾಮ ಪಂಚಾಯತ್‌ನ ಸುದ್ದಿಗಳು, ಪ್ರಕಟಣೆಗಳು, ಜಾಹೀರಾತುಗಳು ನಮ್ಮ ಪತ್ರಿಕೆಯಲ್ಲಿ ಪ್ರಕಟಗೊಂಡಿದೆ. ಸಾರ್ವಜನಿಕರಿಗೆ ತಲುಪಲಿಕ್ಕಾಗಿ ನೀಡುವ ಪ್ರಕಟಣೆಗಳು ಅತೀ ಹೆಚ್ಚು ಜನರಿಗೆ ತಲುಪುವ ಪತ್ರಿಕೆಗೆ ನೀಡಬೇಕೆಂಬುದನ್ನು ಎಲ್ಲರೂ ಒಪ್ಪುತ್ತಾರೆ. ನಮ್ಮ ಪತ್ರಿಕೆಯ ಪ್ರಸಾರದ ಸಂಖ್ಯೆ ಕಡಿಮೆ ಇದ್ದರೆ ನಮಗೆ ಜಾಹೀರಾತು ನೀಡದೇ ಇರುವುದಕ್ಕೆ ಯಾವುದೇ ಕಾರಣಗಳನ್ನು ಕೇಳಲು ನಾವು ಬಯಸುವುದಿಲ್ಲ. ಆದರೆ ನಮ್ಮ ಪ್ರಸಾರ ಸಂಖ್ಯೆ ಉಳಿದ ಪತ್ರಿಕೆಗಳಿಗಿಂತ ೧೦ ಪಟ್ಟು ಜಾಸ್ತಿ ಇದ್ದರೂ ನಮಗೆ ಜಾಹೀರಾತು ನೀಡದಿರುವ ಬಗ್ಗೆ ಕಾರಣಗಳನ್ನು ಮತ್ತು ಗ್ರಾಮ ಪಂಚಾಯತ್‌ಗಳು ಆ ಕುರಿತು ಯಾವುದಾದರೂ ನಿರ್ಣಯಗಳು ಮಾಡಿದ್ದಲ್ಲಿ ಅದನ್ನು ತಿಳಿಯಲು ಬಯಸಿzವೆ. ಉzಶಪೂರ್ವಕವಾಗಿ ಕೆಲವು ಗ್ರಾಮ ಪಂಚಾಯತ್‌ಗಳು ಸುದ್ದಿ ಬಿಡುಗಡೆಗೆ ಜಾಹೀರಾತು ನೀಡದೆ ಜನರಿಗೆ ಮಾಹಿತಿಯನ್ನು ಮರೆ ಮಾಚಲು ಗ್ರಾಮ ಪಂಚಾಯತ್‌ಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವೂ ಕಾರಣವಾಗಿರಬಹುದೇ ಎಂಬುದನ್ನೂ ತಿಳಿದುಕೊಳ್ಳಲು ಮುಂದಾಗಿzವೆ. ನಮ್ಮ ಪತ್ರಿಕೆ ನಿಷ್ಪಕ್ಷಪಾತವಾಗಿ ಜನಮನ್ನಣೆ ಗಳಿಸಿದ್ದರೂ ಗ್ರಾಮಸ್ಥರಿಗೆ, ಗ್ರಾಮ ಪಂಚಾಯತ್‌ನ ಆಡಳಿತ ಮಂಡಳಿಗೆ ನಮ್ಮ ಪತ್ರಿಕೆಯ ಬಗ್ಗೆ ಅಸಮಾಧಾನಗಳಿದ್ದರೆ ಅದನ್ನು ಮುಕ್ತವಾಗಿ ಚರ್ಚಿಸಿ ಸರಿಪಡಿಸಲು ಸುದ್ದಿ ಬಳಗ ತಯಾರಿದೆ. ಗ್ರಾಮದ ಹಿತಾಸಕ್ತಿಗಾಗಿ ಕೆಲಸ ಮಾಡುವ ಜನಸೇವಕರಾದ ಜನಪ್ರತಿನಿಧಿಗಳೊಂದಿಗೆ ಸಾರ್ವಜನಿಕ ಸಭೆ ನಡೆಸಲು ಈಗಾಗಲೇ ಪತ್ರ ಬರೆದು ವಿನಂತಿಸಲಾಗಿದೆ. ಆದರೆ ಇದೀಗ ವಿಧಾನ ಪರಿಷತ್‌ನ ಉಪಚುನಾವಣೆಗೆ ದಿನಾಂಕ ಘೋಷಣೆಯಾಗಿ ನೀತಿ ಸಂಹಿತೆ ಜಾರಿಯಾಗಿರುವುದರಿಂದ ಗ್ರಾಮ ಪಂಚಾಯತ್‌ಗಳಲ್ಲಿ ಸಭೆ ನಡೆಸಲು ಅಸಾಧ್ಯವಾಗಿರುವುದರಿಂದ ನೀತಿ ಸಂಹಿತೆ ಅವಧಿ ಮುಕ್ತಾಯವಾದ ನಂತರ ಸಾರ್ವಜನಿಕ ಸಭೆ ನಡೆಸಲು ನಿರ್ಧರಿಸಲಾಗಿದೆ.

LEAVE A REPLY

Please enter your comment!
Please enter your name here