ಉಜಿರೆ: ಎಸ್.ಡಿ.ಎಮ್. ಕಾಲೇಜಿನ ಸಸ್ಯಶಾಸ್ತ್ರ ವಿಭಾಗದಿಂದ ಲ್ಯಾಬ್ ಇನ್ ಕ್ಯಾಬ್ ಕಾರ್ಯಕ್ರಮ

0

ಉಜಿರೆ: ಎಸ್.ಡಿ.ಎಮ್. ಕಾಲೇಜಿನ ಸಸ್ಯಶಾಸ್ತ್ರ ವಿಭಾಗದಿಂದ ಧರ್ಮಸ್ಥಳ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಒಂಭತ್ತನೆಯ ಹಾಗು ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಲ್ಯಾಬ್ ಇನ್ ಕ್ಯಾಬ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಈ ಕಾರ್ಯಕ್ರಮದಲ್ಲಿ ಏಕದಳ ಹಾಗೂ ದ್ವಿದಳ ಸಸ್ಯದ ಕಾಂಡದ ಒಳ ರಚನೆಯನ್ನು, ಸಸ್ಯ ಅಂಗಾಂಶಗಳ ವಿಧಗಳನ್ನು ಮತ್ತು ಪತ್ರ ರಂಧ್ರದ ರಚನೆಯನ್ನು ಸೂಕ್ಷ್ಮದರ್ಶಕದ ಸಹಾಯದಿಂದ ವಿವರಿಸಲಾಯಿತು.ಸಸ್ಯಶಾಸ್ತ್ರಕ್ಕೆ ಸಂಬಂಧಿಸಿದಂತೆ ಹಲವಾರು ಕುತೂಹಲಕಾರಿಯಾದ ಪ್ರಯೋಗಗಳನ್ನು ವಿದ್ಯಾರ್ಥಿಗಳಿಗೆ ಪ್ರದರ್ಶಿಸಲಾಯಿತು.

ಈ ಕಾರ್ಯಕ್ರಮವನ್ನು ಸಸ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿಯರಾದ ಕುಮಾರಿ ಮಂಜುಶ್ರೀ ಕೆ ಹಾಗೂ ಕುಮಾರಿ ಭವ್ಯ ಡಿ ನಾಯಕ್ ಇವರು ನಡೆಸಿಕೊಟ್ಟರು. ಈ ಕಾರ್ಯಕ್ರಮಕ್ಕೆ ತೃತೀಯ ಬಿ.ಎಸ್ಸಿ ವಿದ್ಯಾರ್ಥಿನಿಯರಾದ ಸಂಜನಾ , ಅನನ್ಯ, ಲಾವಣ್ಯ ಹಾಗೂ ಸುರಕ್ಷಾ ಇವರು ಸಹಕರಿಸಿದರು.

ಶಾಲೆಯ ಮುಖ್ಯೋಪಾಧ್ಯಾಯಿನಿ ಪರಿಮಳ ಹಾಗೂ ವಿಜ್ಞಾನ ಶಿಕ್ಷಕಿಯರ ಸಹಕಾರದೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು. ಸುಮಾರು 150 ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಪ್ರಯೋಜನವನ್ನು ಪಡೆದುಕೊಂಡರು.

LEAVE A REPLY

Please enter your comment!
Please enter your name here