ಬರೆಂಗಾಯ: ಶಾಲಾ ಅಮೃತ ಮಹೋತ್ಸವದ ಪೂರ್ವಭಾವಿ ಸಭೆ ಸೆ.22ರಂದು ಶಾಲಾ ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಳೆ ವಿದ್ಯಾರ್ಥಿಗಳು ವಿವಿಧ ಸಮಿತಿಯ ಸದಸ್ಯರುಗಳು ಭಾಗವಹಿಸಿದ್ದರು.
ಸಭೆಯಲ್ಲಿ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಡಿ.27 ಹಾಗೂ 28ರಂದು ನಡೆಸುವಂತೆ ತೀರ್ಮಾನಿಸಲಾಯಿತು. ಲಕ್ಷ್ಮಿ ದೇವಧರ್ ಮತ್ತು ಮಕ್ಕಳು ಮೊಳಂಪಾಯ ಇವರು ಅಮೃತ ಮಹೋತ್ಸವಕ್ಕೆ 1ಲಕ್ಷ ನೀಡಿ ಸಹಕರಿಸಿದರು. ಅಮೃತ ಮಹೋತ್ಸವದ ಒಂದು ದಿನದ ಊಟದ ವ್ಯವಸ್ಥೆಯನ್ನು ಊರಿನ ಹಿರಿಯರಾದ ಹೊನ್ನಪ್ಪ ಗೌಡ ಮೆರ್ಲ ಇವರು ನೀಡುವ ಭರವಸೆಯನ್ನು ನೀಡಿದರು ಹಾಗೂ ಆ ದಿನದ ವಿವಿಧ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲಾಯಿತು.
ವೇದಿಕೆಯಲ್ಲಿ ಉದ್ಯಮಿಗಳಾದ ಶಿವರಾಮ್ ರಾವ್ ಕೊಡಂಗೆ, ಅಮೃತ ಮಹೋತ್ಸವ ಸಮಿತಿಯ ಅಧ್ಯಕ್ಷ ಪ್ರವೀಣ್ ಹೆಬ್ಬಾರ್, ಎಸ್ ಡಿ ಎಮ್ ಸಿ ಅಧ್ಯಕ್ಷ ರುಕ್ಮಯ ಪೂಜಾರಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶಿವರಂಜನ್ ಹಠವಳೆ, ಅಮೃತ ಮಹೋತ್ಸವದ ಕೋಶಾಧಿಕಾರಿಗಳು ಕೃಷ್ಣಕುಮಾರ್ ಕಾಟ್ಲಾ, ಹಾಲು ಉತ್ಪಾದಕರ ಸೇವಾ ಸಂಘದ ಅಧ್ಯಕ್ಷ ಸುಂದರ ಗೌಡ ಕಜೆ, ಕೃಷ್ಣ ಜನ್ಮಾಷ್ಟಮಿ ಸಮಿತಿಯ ಅಧ್ಯಕ್ಷ ಹೇಮಂತಗೌಡ ಕಜೆ, ನಿಸರ್ಗ ಯುವಜನೇತರ ಮಂಡಲ ಬರಂಗಾಯ ಇದರ ಅಧ್ಯಕ್ಷ ಪುನೀತ್ ಕುಮಾರ್, ಎಸ್ ಡಿ ಎಂ ಸಿ ಯ ಸರ್ವ ಸದಸ್ಯರು ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.