ಬೆಳ್ತಂಗಡಿ: ಬೆಳ್ತಂಗಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಿಂದಿ ದಿವಸ ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಧರ್ಮಸ್ಥಳ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಹಿಂದಿ ಶಿಕ್ಷಕಿ ಮಮತಾ ಎನ್. ಹೊಳ್ಳ ಆಗಮಿಸಿ, ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಹಿಂದಿ ದಿವಸದ ಮಹತ್ವ, ಹಿಂದಿ ಭಾಷೆಯನ್ನು ಉಳಿಸಿ ಬೆಳೆಸುವುದು ಅದಕ್ಕೆ ನಮ್ಮೆಲ್ಲರ ಸಹಕಾರ ಮತ್ತು ಶ್ರಮ ಅಗತ್ಯವಿದೆ ಎಂದು ಮಾತನಾಡಿದರು.
ಹಿಂದಿ ಭಾಷಣ, ಹಿಂದಿ ಗೀತ ಗಾಯನ, ಹಿಂದಿ ಕಥೆ ರಚನೆಯ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಹತ್ತನೇ ತರಗತಿಯ ಯಶಸ್ ಡಿ. ನಿರೂಪಿಸಿ 9ನೇ ತರಗತಿಯ ಅನಘ ಸ್ವಾಗತಿಸಿ, ಕುಮಾರಿ ಯಶ್ವಿ ಅತಿಥಿಗಳನ್ನು ಪರಿಚಯಿಸಿ, ಕುಮಾರಿ ಹ್ಯಾಪಿ ವಂದಿಸಿದರು.
ಶಾಲಾ ಮುಖ್ಯೋಪಾಧ್ಯಾಯಿನಿ ಹೇಮಲತಾ ಎಂ. ಆರ್. ಶುಭ ಹಾರೈಸಿದರು. ಹಿಂದಿ ಶಿಕ್ಷಕಿ ಮೆನಿತ ಕೆ.ಎಂ., ಮಂಜುನಾಥ್ ರೂಪುಗೊಳಿಸಿದ ಕಾರ್ಯಕ್ರಮದಲ್ಲಿ ಶಿಕ್ಷಕಿ ಸುಮಲತ ಸಹಕಾರ ನೀಡಿದರು. ಹಿಂದಿ ಭಾಷೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
p>