ಗುರುವಾಯನಕೆರೆ: ಗುರುವಾಯನಕೆರೆ ವಿಕಾಸ ವಿವಿಧೋದ್ದೇಶ ಸಹಕಾರಿ ಸಂಘದ ಮಹಾಸಭೆ ಸೆ.21ರಂದು ಸಂಘದ ಅಧ್ಯಕ್ಷ ಎಲೋಸಿಯಸ್ ಡಿ’ಸೋಜಾ ಅಧ್ಯಕ್ಷತೆಯಲ್ಲಿ ಸಂಘದ ಸಭಾಭವನ ವಿಕಾಸ ಸದನದಲ್ಲಿ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಎಲೋಸಿಯಸ್ ಡಿ’ಸೋಜ ಮಾತನಾಡಿ 2023-24 ಸಾಲಿನಲ್ಲಿ ರೂ.55 ಕೋಟಿ ಠೇವಣಿ ಸಂಗ್ರಹವಾಗಿದೆ. ರೂ.217 ಕೋಟಿ ವ್ಯವಹಾರ ನಡೆಸಿ ರೂ.27ಲಕ್ಷ ಲಾಭ ಗಳಿಸಿದೆ. ಸದಸ್ಯರಿಗೆ ಶೇ.14 ಡಿವಿಡೆಂಡ್ ನೀಡಲಾಗುವುದು ಎಂದು ತಿಳಿಸಿದರು.
ಉಪಾಧ್ಯಕ್ಷ ಯೋಗೀಶ್ ಪೈ, ನಿರ್ದೇಶಕರಾದ ಮೋಹನ್ ಹೆಗ್ಡೆ, ಗೋಪಿನಾಥ್ ನಾಯಕ್, ಅಂತೋನಿ ಪಾಯಿಸ್, ರಾಘವ ಶೆಟ್ಟಿ, ಗ್ರೆಗೋರಿ ಡಿಮೆಲ್ಲೋ, ಪ್ರವೀಣ್ ಕುಮಾರ್ ಎಚ್. ಎಸ್., ಜಗದೀಶ್, ಶೇಖರ ನಾಯ್ಕ, ಒಲ್ವಿನ್ ಮೋನಿಸ್, ದಿನೇಶ್ ನಾಯಕ್, ಪ್ರವೀಣ್ ಚಂದ್ರ ಮೆಹಂದಲೆ, ಮಮತಾ ಎಂ. ಶೆಟ್ಟಿ ಮತ್ತು ಪ್ರೇಮಾವತಿ ಉಪಸ್ಥಿತರಿದ್ದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿತಾ ಫೆರ್ನಾಂಡಿಸ್ ವರದಿ ಲೆಕ್ಕಾ ಪತ್ರ ಮಂಡಿಸಿದರು. ಸುಕನ್ಯಾ ಕಾಮತ್ ಸ್ವಾಗತಿಸಿ, ನಿರ್ದೇಶಕ ಪ್ರವೀಣ್ ಹೆಚ್ ಎಸ್. ವಂದಿಸಿದರು. ನಿರ್ದೇಶಕ ಓಲ್ವಿನ್ ಮೋನಿಸ್ ಕಾರ್ಯಕ್ರಮ ನಿರೂಪಿಸಿದರು.
ಸಿಬ್ಬಂದಿಗಳಾದ ರೋಹಿತ್ ಕುಮಾರ್, ಮ್ಯಾಕ್ಸಿಮ್ ಪಾಯ್ಸ್, ಶುಭಲಕ್ಷ್ಮಿ, ದಿವ್ಯ ಬಿ.ಎಸ್.. ಹರ್ಷಿತ್, ಕೀರ್ತನ್ ಶಿರವಂತ, ಪ್ರತಿಮಾ ಕಾಮತ್, ಅಕ್ಷತಾ, ಸತೀಶ್ ಕೆ., ಸಂದೀಪ್, ಸುಕುಮಾರ್ ಹೆಗ್ಡೆ, ದಿನೇಶ್ ಗೌಡ, ಚೈತ್ರೇಶ್ ಜೈನ್, ಸಿರಾಜುದ್ದೀನ್, ಒಲಿವಿಯ, ಡಿಸೋಜಾ, ಹರ್ಷಿತಾ, ಮೇಘ ಶ್ರೀ, ಅನೂಪ್ ಜೋಯೆಲ್ ಡಿ’ಸೋಜಾ ಹಾಗೂ ಪಿಗ್ಮಿ ಸಂಗ್ರಾಹಕರು ಸಹಕರಿಸಿದರು.