






ಬಂದಾರು: ಶ್ರೀ ಸಿದ್ದಿವಿನಾಯಕ ದೇವಸ್ಥಾನ ಪೆರ್ಲ-ಬೈಪಾಡಿ ದೇವಸ್ಥಾನದಲ್ಲಿ ಮಹಿಳಾ ಸಮಿತಿಯನ್ನು ಸೆ.21ರಂದು ಸಿದ್ದಿವಿನಾಯಕ ದೇವರ ಸನ್ನಿದಿಯಲ್ಲಿ ದೀಪ ಬೆಳಗಿಸಿ ಅರ್ಚಕರ ಮೂಲಕ ಪ್ರಾರ್ಥನೆ ಸಲ್ಲಿಸಿ ನೂತನ ಮಹಿಳಾ ಸಮಿತಿಯ ಕಾರ್ಯಚಟುವಟಿಕೆಗೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಮಹಿಳಾ ಸಮಿತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರ ಜೋಡಣೆ ಮಾಡುವಲ್ಲಿ ಎಲ್ಲರೂ ಕೈ ಜೋಡಿಸಬೇಕು, ಸಮಿತಿಯು ಯಾವುದೇ ಕಾರ್ಯಾಚಟುವಟಿಕೆ ಮಾಡುವುದಿದ್ದರೂ ಆಡಳಿತ ಮಂಡಳಿಗೆ ತಿಳಿಸುವುದು, ಬ್ರಹ್ಮಕಲಶೋತ್ಸವ ಸಮಯ ಸಮವಸ್ತ್ರ ಧರಿಸುವ ಬಗ್ಗೆ ಹಾಗೂ ಹಲವಾರು ವಿಷಯಗಳ ಬಗ್ಗೆ ಆಡಳಿತ ಸಮಿತಿ ಅಧ್ಯಕ್ಷ ರಮೇಶ್ ಗೌಡ ಅಡ್ಡಾರು ಇವರ ಅದ್ಯಕ್ಷತೆಯಲ್ಲಿ ಚರ್ಚಿಸಲಾಯಿತು.


ದೇವಸ್ಥಾನದ ಮಹಿಳಾ ಸಮಿತಿ ಅಧ್ಯಕ್ಷೆ ಶ್ವೇತಾ ಹಾರ್ತ್ಯಾರ್, ಉಪಾಧ್ಯಕ್ಷೆ ಶ್ಯಾಮಲಾ ಪಯ್ಯೋಡಿ, ರಶ್ಮಿತಾ ಪರಪ್ಪಾಜೆ, ಕುಸುಮಾವತಿ ಅಡ್ಡಾರು, ಕಾರ್ಯದರ್ಶಿ ಮೌನಶ್ರೀ ನಾಗoದೋಡಿ, ಗೀತಾ ತಾರಕೆರೆ, ಪುಷ್ಪಾವತಿ ಪೇರಲ್ದಡಿ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಯಶೋಧ ಅಡ್ಡಾರು ಸ್ವಾಗತಿಸಿ, ಮೌನಶ್ರೀ ನಾಗoದೋಡಿ ನಿರೂಪಿಸಿ ಧನ್ಯವಾದ ಸಲ್ಲಿಸಿದರು.









