ಉಜಿರೆಯಲ್ಲಿ ಶ್ರೀ ದುರ್ಗಾ ಲೇಡಿಸ್ ಟೈಲರ್ ಹೊಲಿಗೆ ತರಬೇತಿ ಕೇಂದ್ರ ಉದ್ಘಾಟನೆ

0

ಉಜಿರೆ: ಇಲ್ಲಿಯ ಬೆಳಾಲು ರಸ್ತೆ ಉಜಿರೆ ಸಹಕಾರ ಸಂಘದ ಹತ್ತಿರ ಶ್ರೀ ದುರ್ಗಾ ಲೇಡೀಸ್ ಟೈಲರ್ ಹೊಲಿಗೆ ತರಬೇತಿ ಕೇಂದ್ರದ ಉದ್ಘಾಟನೆ ಸೆ.16ರಂದು ನಡೆಯಿತು.

ದೀಪ ಬೆಳಗಿಸುವ ಮುಖಾಂತರ ಮಾಲಕರ ಮಾತೃಶ್ರೀ ಲಲಿತ ಕೆ. ಉದ್ಘಾಟಿಸಿದರು. ಕಟ್ಟಡದ ಮಾಲಕಿ ಹರಿಣಾಕ್ಷಿ ಕೆ.. ಉಪಸ್ಥಿತರಿದ್ದು ಶುಭ ಹಾರೈಸಿದರು.

ಮಾಲಕರ ಬಂಧು ಮಿತ್ರರು, ಹಿತೈಷಿಗಳು ಆಗಮಿಸಿ ಶುಭ ಹಾರೈಸಿದರು. ತರಬೇತಿ ಕೇಂದ್ರದ ಮಾಲಕಿ ಉಮಾಶ್ರೀ ಕೆ.ನಾರಾಯಣ ಪೂಜಾರಿ, ಕು.ಪುಷ್ಪಲತಾ ಸ್ವಾಗತಿಸಿ ಗೌರವಿಸಿದರು.

LEAVE A REPLY

Please enter your comment!
Please enter your name here