ಬೆಳ್ತಂಗಡಿ: ಕಥೋಲಿಕ್ ಸ್ತ್ರೀ ಮಂಡಳಿ ಬೆಳ್ತಂಗಡಿ ವಲಯ ಇದರ ಸಹಭಾಗಿತ್ವದಲ್ಲಿ ಮೊಂತಿ ಹಬ್ಬ (ತೆನೆ ಹಬ್ಬ)ವನ್ನು ಬೆಳ್ತಂಗಡಿ ಹೋಲಿ ರಿಡೀಮರ್ ಆಡಿಟೋರಿಯಂನಲ್ಲಿ ಸೆ.15ರಂದು ಆಚರಿಸಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಬೆಳ್ತಂಗಡಿ ಚರ್ಚ್ ನ ಪ್ರಧಾನ ಗುರು ವಂ.ಫಾ.ವಾಲ್ಟರ್ ಡಿಮೆಲ್ಲೊ ನೆರವೇರಿಸಿ ಸಂದೇಶ ನೀಡಿದರು.
ವೇದಿಕೆಯಲ್ಲಿ ಕಥೋಲಿಕ್ ಸ್ತ್ರಿ ಮಂಡಳಿ ಬೆಳ್ತಂಗಡಿ ವಲಯ ಅಧ್ಯಕ್ಷೆ ಗ್ರೇಸಿ ಲೋಬೋ ಉಪಸ್ಥಿತರಿದ್ದರು.ಉಜಿರೆ ಚರ್ಚ್ ಆಧ್ಯಾತ್ಮಿಕ ನಿರ್ದೇಶಕ ವಂ.ಫಾ.ಅಬೆಲ್ ಲೋಬೊ ಶುಭ ಸಂದೇಶ ನೀಡಿದರು. ಕಥೋಲಿಕ್ ಸ್ತ್ರೀ ಮಂಡಳಿ ಕಾರ್ಯದರ್ಶಿ ಆಶು ಜುಲಿಟಾ ಕ್ರಾಸ್ತ , ಚರ್ಚ್ ಉಪಾಧ್ಯಕ್ಷ ವಾಲ್ಟರ್ ಮೋನಿಸ್, ಕಾರ್ಯದರ್ಶಿ ಗಿಲ್ಬರ್ಟ್ ಪಿಂಟೋ ಉಪಸ್ಥಿತರಿದ್ದರು.
ಅಧ್ಯಕ್ಷೆ ಗ್ರೇಸಿ ಲೋಬೊ ಪ್ರಾಸ್ತಾವಿಕ ನುಡಿಯೊಂದಿಗೆ ಸ್ವಾಗತಿಸಿದರು. ಕಾಂತಿಯವರು ಕೆನಾರಾ ಬ್ಯಾಂಕಿನಲ್ಲಿ ಹೊಸತಾಗಿ ಜಾರಿಗೆ ಬಂದ ಏಂಜಲ್ ಯೋಜನೆಯ ಬಗ್ಗೆ ಸವಿಸ್ತಾರವಾದ ಮಾಹಿತಿ ನೀಡಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ನಂತರ ಲಕ್ಕಿಡಿಪ್ ಬಹುಮಾನ ವಿತರಣೆ ಹಾಗೂ ಇತರ ಚಟುವಟಿಕೆಗಳು ನಡೆಯಿತು. 600ಕ್ಕೂ ಹೆಚ್ಚು ಕಥೋಲಿಕ್ ಸ್ತ್ರೀಯರು ಹಾಗೂ ಧರ್ಮ ಭಗಿನಿಯರು ಭಾಗಿಯಾಗಿದ್ದರು. ಲವೀನ ಮತ್ತು ಪ್ಲೇವಿ ಯವರು ಕಾಯ೯ಕ್ರಮವನ್ನು ನಿರೂಪಿಸಿದರು. ಸಹ ಕಾರ್ಯದರ್ಶಿ ಜೆತ್ರುಡ್ ಡಿಸೋಜ ವಂದಿಸಿದರು. ಕಾಯ೯ಕ್ರಮದಲ್ಲಿ ಭಾಗವಹಿಸಿದ ಎಲ್ಲಾರಿಗೂ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು.