ಆಳ್ವಾಸ್ ಶಿಕ್ಷಣ ಸಂಸ್ಥೆಯ ಎಂ ಬಿ ಎ ಮತ್ತು ಎಸ್ ಡಿ ಎಂ ಪಿ.ಯು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಂದ ಅಗ್ರಿಲೀಫ್ ಸಂಸ್ಥೆಗೆ ಭೇಟಿ

0

ನಿಡ್ಲೆ: ಅಗ್ರಿಲೀಫ್ ಸಂಸ್ಥೆ ಜೈವಿಕ ವಿಘಟನೀಯ ಉತ್ಪನ್ನ ಗಳನ್ನು ತಯಾರಿಸುವ ಭಾರತದ ಮೊಟ್ಟ ಮೊದಲ ನಂಬರ್ ಒನ್ ಸಂಸ್ಥೆಯಾಗಿದ್ದು ಇಲ್ಲಿ ತಯಾರಾಗುವ ನವೀನ ಮಾದರಿಯ ಪರಿಸರ ಸ್ನೇಹಿ ಉತ್ಪನ್ನಗಳು ಜಗತ್ತಿನ ನಾನಾ ದೇಶಗಳ ಗಮನ ಸೆಳೆಯುತ್ತಿದೆ. ವಿದ್ಯಾರ್ಥಿಗಳಿಂದ ಗ್ರಾಮೀಣ ಮಟ್ಟದಲ್ಲಿ ಹುಟ್ಟಿಕೊಂಡ ಈ ಕಂಪನಿ ಮತ್ತು ಇಲ್ಲಿ ತಯಾರಿಸಲ್ಪಡುವ ವಿವಿಧ ರೀತಿಯ ಜೈವಿಕ ಉತ್ಪನ್ನಗಳ ಕುರಿತು ಅಧ್ಯಯನ ನಡೆಸಲು ಆಗಮಿಸಿ ತಮ್ಮ ಮುಂದಿನ ಭವಿಷ್ಯದ ಯೋಜನೆಗಳಿಗೆ ಪ್ರೇರಣೆ ಪಡೆಯುವುದು ಭೇಟಿಯ ಮೂಲ ಉದ್ದೇಶ ಎಂದು ಅಗ್ರಿಲೀಫ್ ಸಂಸ್ಥೆ ತಿಳಿಸಿದೆ.

ಜಿಲ್ಲೆಯ ವಿವಿಧ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿಂದ ಮತ್ತು ಸರಕಾರಿ ಶಾಲಾ ಕಾಲೇಜುಗಳಿಂದ ಭೇಟಿ ನೀಡಿ ಸಂಸ್ಥೆಯ ಮತ್ತು ಉತ್ಪನ್ನಗಳ ಬಗ್ಗೆ ಅಧ್ಯಯನ ನಡೆಸಿ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.

LEAVE A REPLY

Please enter your comment!
Please enter your name here