ತೆಕ್ಕಾರು: ಗ್ರಾಮ ಪಂಚಾಯತ್ ನ 2024-25ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆ ಗ್ರಾ.ಪಂ. ಅಧ್ಯಕ್ಷೆ ಎನ್.ರಹಿಯಾನತ್ ಅಧ್ಯಕ್ಷತೆಯಲ್ಲಿ ಸೆ.9ರಂದು ಗ್ರಾ.ಪಂ. ಆವರಣದಲ್ಲಿ ನಡೆಯಿತು. ಮಾರ್ಗದರ್ಶಿ ಅಧಿಕಾರಿಯಾಗಿ ಬೆಳ್ತಂಗಡಿ ಪಶು ಆಸ್ಪತ್ರೆಯ ಮುಖ್ಯ ಪಶು ವೈದ್ಯಾಧಿಕಾರಿ, ಸಂಚಾರಿ ಮತ್ತು ವಿಸ್ತರಣೆಯ ವಿಶ್ವನಾಥ್ ಸಭೆಯನ್ನು ಮುನ್ನಡೆಸಿದರು.
ಸಭೆಯ ಪ್ರಾರಂಭದಲ್ಲಿ ಮೂರು ಅಧಿಕಾರಿಗಳು ಮಾತ್ರ ಬಂದಿರುವುದು. ಯಾಕೆ ಉಳಿದ ಅಧಿಕಾರಿಗಳು ಬರುವುದಿಲ್ಲ.ಅವರಿಗೆ ಜವಾಬ್ದಾರಿ ಇಲ್ಲವೇ. ನಾವು ತಾಲೂಕು ಕೇಂದ್ರದ ಇಲಾಖೆ ಹೋದರೆ ನಮ್ಮನ್ನು ಅಲ್ಲಿಗೆ ಹೋಗಿ ಇಲ್ಲಿಗೆ ಹೋಗಿ ಎಂದು ಹೇಳುತ್ತಾರೆ. ನಮಗೆ ಮಾಹಿತಿ ಯಾರು ನೀಡುವುದು ಎಂದು ಗ್ರಾಮಸ್ಥ ಇನಾಸ್ ಆಕ್ರೋಶ ವ್ಯಕ್ತಪಡಿಸಿದರು.
ನಾವು ಬಡವರು ಕೆಲಸಕ್ಕೆ ಹೋಗದೆ ಸಭೆಗೆ ಹಾಜರಾಗಿದ್ದೇವೆ ಆದರೆ ಅಧಿಕಾರಿಗಳಿಗೆ ತಾತ್ಸಾರ ಮನೋಭಾವ ಯಾಕೆ. ತೆಕ್ಕಾರು ಗ್ರಾಮವನ್ನು ಕಡೆಗಣಿಸುವುದೇ, ಸದಸ್ಯರು ಕೂಡ ಇಲ್ಲ. ನಾವು ಪದೇ ಪದೇ ಇಲಾಖೆಗೆ ಹೋಗಲು ಅಸಾಧ್ಯವಾದ ಕಾರಣ ಗ್ರಾಮ ಸಭೆಗೆ ತಿಳಿಸಿಕೊಳ್ಳಲು ಬಂದರೆ ಅಧಿಕಾರಿಗಳು ಗೈರು ಎಂದು ಗ್ರಾಮಸ್ಥ ಆದಂ ಹೇಳಿದರು.
ವಿವಿಧ ಇಲಾಖೆಗಳ ಅಧಿಕಾರಿಗಳು, ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.