ಸುಲ್ಕೇರಿ: ಮಿಷನ್ ಶಕ್ತಿ ಯೋಜನೆ, ಜಿಲ್ಲಾ ಮಹಿಳಾ ಸಬಲೀಕರಣ ಘಟಕ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಬೆಳ್ತಂಗಡಿ ಶಿಶು ಅಭಿವೃದ್ಧಿ ಯೋಜನ ಕಚೇರಿಯ ಸಂಯುಕ್ತ ಆಶ್ರಯದಲ್ಲಿ ಪೋಷನ್ ಅಭಿಯಾನ ಹಾಗೂ ಮಹಿಳಾ ಸಬಲೀಕರಣ ಅರಿವು ಕಾರ್ಯಕ್ರಮ ಕುದ್ಯಾಡಿ ಅಂಗನವಾಡಿ ಕೇಂದ್ರದಲ್ಲಿ ಸೆ.7ರಂದು ಜರುಗಿತು.
ನಿವೃತ್ತ ಶಿಕ್ಷಕ ಡೀಕಯ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಿದರು. ವೇದಿಕೆಯಲ್ಲಿ ಬಾಲವಿಕಾಸ ಸಮಿತಿ ಅಧ್ಯಕ್ಷೆ ಸೌಮ್ಯ ಹರೀಶ್ ದೇವಾಡಿಗ, ಗ್ರಾ.ಪಂ. ಉಪಾಧ್ಯಕ್ಷ ಶುಭಕರ ಪೂಜಾರಿ, ಸದಸ್ಯೆ ಯಶೋಧಾ ಬಂಗೇರ, ಪ್ರಗತಿಪರ ಕೃಷಿಕ ವಿಶ್ವನಾಥ್ ಕುದ್ಯಾಡಿ, ಮಾಜಿ ಗ್ರಾ.ಪಂ.ಅಧ್ಯಕ್ಷರುಗಳಾದ ಸುಂದರ ಆಚಾರ್ಯ ಮತ್ತು ವಸಂತಿ ಸಿ.ಪೂಜಾರಿ, ಬಾಲವಿಕಾಸ ಸಮಿತಿಯ ಹಿರಿಯ ಸದಸ್ಯ ಈಶ್ವರ ಪೂಜಾರಿ, ಒಕ್ಕೂಟದ ಅಧ್ಯಕ್ಷ ರತ್ನಾಕರ ಪೂಜಾರಿ ಹಾಗೂ ಕುದ್ಯಾಡಿ ಶಾಲಾ ಮುಖ್ಯ ಶಿಕ್ಷಕ ನಾಗಭೂಷಣ್ ಉಪಸ್ಥಿತರಿದ್ದರು.
ಸನ್ಮಾನ: ನಿವೃತ್ತ ಅಂಗನವಾಡಿ ಕಾರ್ಯಕರ್ತೆ ಸುಮತಿ ಜೈನ್, ನಿವೃತ್ತ ಶಿಕ್ಷಕ ಡೀಕಯ ಪೂಜಾರಿ ಹಾಗೂ ಪ್ರಗತಿಪರ ಕೃಷಿಕ ವಿಶ್ವನಾಥ್ ಕುದ್ಯಾಡಿ ಅವರುಗಳನ್ನು ಸನ್ಮಾನಿಸಲಾಯಿತು.6 ವರ್ಷದೊಳಗಿನ ಮಕ್ಕಳಿಗೆ ಮುದ್ದುಕೃಷ್ಣ ಸ್ಪರ್ಧೆ ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಒಂದು ತಾಯಿಯ ಹೆಸರಿನಲ್ಲಿ ಒಂದು ಗಿಡ ಎಂಬ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಜೊತೆಗೆ ಸೀಮಂತ ಕಾರ್ಯಕ್ರಮ ಜರಗಿತು.
ಅಂಗನವಾಡಿ ಕೇಂದ್ರದ ವಿದ್ಯಾರ್ಥಿಗಳಿಂದ, ಕುದ್ಯಾಡಿ ಸಮೃದ್ಧಿ ಕಿಶೋರಿ ಸಂಘ ಹಾಗೂ ಹಳೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಭವ್ಯ ಶೇಖರ್ ಸ್ವಾಗತಿಸಿ, ಅರ್ಪಿತಾ ಶರತ್ ವಂದಿಸಿ, ಅಂಗನವಾಡಿ ಕಾರ್ಯಕರ್ತೆ ಜಯಲಕ್ಷ್ಮಿ ನಾರಾಯಣ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಪೋಷಕರು ಹಾಗೂ ಅಂಗನವಾಡಿ ಸಹಾಯಕಿ ಮೀನಾಕ್ಷಿ ಸಹಕರಿಸಿದರು.