ಸೌತಡ್ಕ ಮಹಾಗಣಪತಿ ಕ್ಷೇತ್ರದಲ್ಲಿ ವಿಜೃಂಭಣೆಯಿಂದ ನಡೆದ ಗಣೇಶ ಚತುರ್ಥಿ

0

ಕೊಕ್ಕಡ: ಬಯಲು ಆಲಯ ಖ್ಯಾತಿಯ ಸೌತಡ್ಕ ಮಹಾಗಣಪತಿ ಕ್ಷೇತ್ರದಲ್ಲಿ ಬೆಳಿಗ್ಗೆ 8 ಗಂಟೆಯಿಂದಲೇ ಗಣಪತಿಗೆ ವಿಶೇಷ ಪೂಜೆಗಳು ಪ್ರಾರಂಭವಾಯಿತು.108 ಕಾಯಿ ಗಣಹೋಮ ನಂತರ ರಂಗಪೂಜೆ, ಮದ್ಯಾಹ್ನ ಮಹಾಪೂಜೆ ಬಳಿಕ ಅನ್ನಸಂತರ್ಪಣೆ ನೆರವೇರಿತು.

ಗಣಪನಿಗೆ ವಿಶೇಷ ಅಲಂಕಾರ ಗಣೇಶ ಚತುರ್ಥಿಯ ಈ ವಿಶೇಷ ದಿನದಂದು ಶ್ರೀ ಮಹಾಗಣಪತಿ ದೇವರಿಗೆ ವಿಶೇಷವಾಗಿ ಮಲ್ಲಿಗೆ, ಸೇವಂತಿಗೆ, ತುಳಸಿ, ಗುಲಾಬಿ, ಗರಿಕೆ, ಚೆಂಡು ಹೂವು ಇನ್ನೂ ವಿವಿಧ ಆಕರ್ಷಕ ಮತ್ತು ದೇವರಿಗೆ ಪ್ರಿಯವಾದ ಹೂವುಗಳ ಹಾರದಿಂದ ಅಲಂಕರಿಸಲಾಗಿತ್ತು.

ಸಾವಿರಾರು ಭಕ್ತರಿಂದ ಬಯಲು ಗಣಪನ ದರ್ಶನ: ಗ್ರಾಮಸ್ಥರು ಸೇರಿ ಊರ ಪರವೂರ ಸಾವಿರಾರು ಭಕ್ತರು ಕ್ಷೇತ್ರಕ್ಕೆ ಆಗಮಿಸಿ ಸರತಿ ಸಾಲಿನಲ್ಲಿ ನಿಂತು ದೇವರಿಗೆ ಪ್ರಿಯವಾದ ಗರಿಕೆ, ಸೌತೆಕಾಯಿ ನೀಡಿ ದೇವರ ದರ್ಶನ ಪಡೆದರು.

ಈ ಸಂದರ್ಭದಲ್ಲಿ ದೇವಳದ ಆಡಳಿತಾಧಿಕಾರಿ, ಕಾರ್ಯನಿರ್ವಾಹನಾಧಿಕಾರಿ ಕೆ ವಿ ಶ್ರೀನಿವಾಸ್, ಮ್ಯಾನೇಜರ್ ರಾಮಕೃಷ್ಣ, ಅರ್ಚಕವೃಂದ, ಮಾಜಿ ವ್ಯವಸ್ಥಾಪನಾ ಸಮಿತಿಯ ಸದಸ್ಯರುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here