ಬೆಳ್ತಂಗಡಿ ತಾಲೂಕಿನ ೭೭ ಕಡೆಗಳಲ್ಲಿ ಸಾರ್ವಜನಿಕ ಗಣೇಶೋತ್ಸವ ಸಂಭ್ರಮ, ಸಡಗರದಿಂದ ಆಚರಣೆ

0

ಬೆಳ್ತಂಗಡಿ: ಭಾದ್ರಪದ ಶುಕ್ಲದ ಚೌತಿಯಂದು ನಾಡಿನಾದ್ಯಂತ ವಿಘ್ನವಿನಾಯಕನನ್ನು ಬರ ಮಾಡಿಕೊಳ್ಳುವ ದಿನ. ಸೆ.೬ರಂದು ಗೌರಿ ಹಬ್ಬ ಹಾಗೂ ಸೆ.೭ರಿಂದ ಗಣೇಶೋತ್ಸವ ಸಂಭ್ರಮ-ಸಡಗರದಿಂದ ನೆರವೇರಲಿದ್ದು, ತಾಲೂಕಿನಾದ್ಯಂತ ೭೭ ಕಡೆಗಳಲ್ಲಿ ಸಾರ್ವಜನಿಕ ಗಣೇಶೋತ್ಸವ ನಡೆಯಲಿದೆ.
ಹೆಚ್ಚಿನ ಕಡೆಗಳಲ್ಲಿ ಒಂದರಿಂದ ಮೂರು ದಿನಗಳ ಕಾಲ ಗಣೇಶೋತ್ಸವ ಆಯೋಜನೆಗೊಳ್ಳುತ್ತದೆ. ಕೆಲವು ಕಡೆಗಳಲ್ಲಿ ನಾಲ್ಕು, ಐದು ದಿನಗಳ ಉತ್ಸವವೂ ನಡೆಯುತ್ತದೆ. ಬೆಳ್ತಂಗಡಿಯ ಸಾರ್ವಜನಿಕ ಗಣೇಶೋತ್ಸವ ೭ ದಿನ ನಡೆಯಲಿದ್ದು, ತಾಲೂಕಿನಲ್ಲೇ ಇದೇ ಗರಿಷ್ಠ ದಿನಗಳ ಆರಾಧನೆಯಾಗಿದೆ. ಗಣೇಶೋತ್ಸವದ ಕೊನೆಯ ದಿನ ಎಲ್ಲೆಡೆ ವಿಜೃಂಭಣೆಯ ವಿಸರ್ಜನಾ ಮೆರವಣಿಗೆಗಳು ನಡೆಯಲಿವೆ. ಸಾರ್ವಜನಿಕವಾಗಿ ಮಾತ್ರವಲ್ಲದೆ ಮನೆಗಳಲ್ಲಿಯೂ ಗಣಪತಿ ಪೂಜೆ ನಡೆಯಲಿದೆ. ಸಾರ್ವಜನಿಕ ಗಣೇಶೋತ್ಸವ, ಶೋಭಾಯಾತ್ರೆಗಳ ಸಂದರ್ಭ ಬಂದೋಬಸ್ತ್‌ಗೆ ಪೊಲೀಸರನ್ನು ನಿಯೋಜಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಲ್ಲೆಲ್ಲಿ ಗಣೇಶೋತ್ಸವ?: ಬೆಳ್ತಂಗಡಿ ತಾಲೂಕಿನ ಬೆಳ್ತಂಗಡಿ, ಧರ್ಮಸ್ಥಳ, ಪುಂಜಾಲಕಟ್ಟೆ, ವೇಣೂರು ಮತ್ತು ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಪೊಲೀಸ್ ಠಾಣೆಗಳ ಅನುಮತಿ ಪಡೆದು ಸಮಿತಿಗಳ ಮೂಲಕ ಸಾರ್ವಜನಿಕ ಗಣೇಶೋತ್ಸವ ನಡೆಸಲಾಗುತ್ತಿದೆ.
ಬೆಳ್ತಂಗಡಿಯ ಶ್ರೀ ನಾರಾಯಣ ಗುರು ವಾಣಿಜ್ಯ ಸಂಕೀರ್ಣ, ಬೆಳ್ತಂಗಡಿಯ ಶ್ರೀ ಧರ್ಮಸ್ಥಳ ಮಂಜುನಾಥ ಕಲಾಭವನ, ಉಜಿರೆ ಶ್ರೀ ಕ್ಷೇತ್ರ ತಿಮರೋಡಿ ಕುಂಜರ್ಪ ವಠಾರ, ಓಡೀಲು ಮಹಾಲಿಂಗೇಶ್ವರ ದೇವಸ್ಥಾನ, ಮಿತ್ತಬಾಗಿಲು ಕೊಲ್ಲಿ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನ ಸಭಾಭವನ, ಲಾಯಿಲ ವಿಶ್ವೇಶ್ವರ ಕಲಾ ಮಂದಿರ, ಉಜಿರೆ ಶಾರದಾ ಮಂಟಪ, ಗೇರುಕಟ್ಟೆ ಮಂಜಲಡ್ಕ, ಅರ್ಧನಾರೀಶ್ವರ ದೇವಸ್ಥಾನ ಇಂದಬೆಟ್ಟು, ಹುಣ್ಸೆಕಟ್ಟೆ ಸಮುದಾಯ ಭವನ, ಉಜಿರೆ ಸಿದ್ದವನ, ದುರ್ಗಾಪರಮೇಶ್ವರಿ ದೇವಸ್ಥಾನ ಮೂಂಡೂರು, ಮೂಂಡೂರು ಮಂಗಳಗಿರಿ ನಾಗಕಲ್ಲುರ್ಟಿ ದೇವಸ್ಥಾನ, ನಡಗುತ್ತು ದೇವಪ್ಪಜಿ ಸ್ಮಾರಕ ಭವನ, ಶ್ರೀಕೃಷ್ಣ ಆದೂರು ಪೆರಾಲ್ ಸಭಾಭವನ, ಗುರುವಾಯನಕೆರೆ ಕುಲಾಲ ಮಂದಿರ, ಸವಣಾಲು ಗೋಪಾಲಕೃಷ್ಣ ಭಜನಾ ಮಂದಿರ, ಉಜಿರೆ-ಗುರಿಪಳ್ಳ ಲೋಕನಾಥಶ್ವೇರ ದೇವಸ್ಥಾನ ಸಭಾಂಗಣ, ಮಲವಂತಿಗೆ ಕಜಕ್ಕೆ ಗಣೆಶೋತ್ಸವ ಟ್ರಸ್ಟ್, ಸವಣಾಲು ರಾಧಾಕೃಷ್ಣ ಸಭಾ ಭವನ, ಮಲವಂತಿಗೆ ಗುತ್ಯಡ್ಕ ಶ್ರೀ ವಿದ್ಯಾಗಣಪತಿ ಸೇವಾ ಸಮಿತಿ, ಮಡಂತ್ಯಾರು ಸಾರ್ವಜನಿಕ ಗಣೇಶೋತ್ಸವ , ಪುಂಜಾಲಕಟ್ಟೆ, ಕುಕ್ಕಳ ವೀರಾಂಜನೇಯ ದೇವಸ್ಥಾನ, ಶಿಬಾಜೆ ದುರ್ಗಾಪರಮೇಶ್ವರಿ ದೇವಸ್ಥಾನ, ಹತ್ಯಡ್ಕ ಕುಂಟಾಲಪಲ್ಕೆ, ಅರಸಿನಮಕ್ಕಿ, ಕಾಯರ್ತ್ತಡ್ಕ, ಪುದುವೆಟ್ಟು, ಬರೆಂಗಾಯ, ಶಿಶಿಲ, ಪಟ್ರಮೆ, ಬಾರ್ಯದ ಮುರುಗೋಳಿ, ಕಲ್ಲೇರಿ, ಬಾರ್ಯ ಪಿಲಿಗೂಡು, ಕಣಿಯೂರು ಕಸಬಾ, ಮೈರೋಳ್ತಡ್ಕ, ಇಳಂತಿಲ, ಮುರ, ಶಿಬಾಜೆ ದುರ್ಗಾಪರಮೇಶ್ವರಿ ದೇವಸ್ಥಾನ, ನಿಟ್ಟಡೆ ಮಂಜುಶ್ರೀ ಭಜನಾ ಮಂದಿರ, ಪೆರಿಂಜೆ ಶಾಲಾ ವಠಾರ, ಆರಂಬೋಡಿ ಹನ್ನೆರಡುಕಾವಲು, ಪಲಾರಗೋಳಿ, ಮರೋಡಿ ಪಿಜತ್ತಕಟ್ಟೆ, ಅಂಡಿಂಜೆ, ಶಿರ್ಲಾಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಸುಲ್ಕೇರಿ ಶ್ರೀರಾಮ ಶಾಲಾ ವಠಾರ, ಅಳದಂಗಡಿ ಸೋಮನಾಥೇಶ್ವರಿ ದೇವಸ್ಥಾನ ಬಳಿ, ಬಳಂಜ ಶಾಲಾ ವಠಾರ, ನಾವರ ಮಂಜುನಾಥ ಭಜನಾ ಮಂಡಳಿ, ಗುಜ್ಯೋಟ್ಟು ಸಾವ್ಯ, ಮರೋಡಿ ಕೂಕ್ರಬೆಟ್ಟು ಶಾಲೆ, ಕಾಶಿಪಟ್ಣ ಕೇಳದ ಪೇಟೆ ಪಂಚಲಿಂಗೇಶ್ವರ ದೇವಸ್ಥಾನ, ಮಂಜುಶ್ರೀ ಸಭಾಭವನ ಕುತ್ಲೂರು, ವೇಣೂರು ಪಲ್ಗುಣಿ ಸೇವಾ ಸಂಘ, ಪೆರಾಡಿ ಮಾವಿನಕಟ್ಟೆ, ನಾರಾವಿ ಸೂರ್ಯ ನಾರಾಯಣ ದೇವಸ್ಥಾನ, ದೇಲಂಪುರಿ ಮಹಾಗಣಪತಿ ದೇವಸ್ಥಾನ, ನಿಟ್ಟಡ್ಕ ನಾಲ್ಕೂರು ಸೇರಿದಂತೆ ಹಲವೆಡೆ ಸಾರ್ವಜನಿಕ ಗಣೇಶೋತ್ಸವ ಸಂಭ್ರಮದಿಂದ ನಡೆಯಲಿದೆ.

ಪೊಲೀಸ್ ಠಾಣೆಗಳಿಂದ
ಪಡೆದಿರುವ ಅನುಮತಿ

ವೇಣೂರು ೨೦
ಪುಂಜಾಲಕಟ್ಟೆ ೭
ಧರ್ಮಸ್ಥಳ ೧೯
ಬೆಳ್ತಂಗಡಿ ೨೪
ಉಪ್ಪಿನಂಗಡಿ ೭
ಒಟ್ಟು ೭೭

p>

LEAVE A REPLY

Please enter your comment!
Please enter your name here