ಪುದುವೆಟ್ಟಿನ ನಡ್ಯೇಲ್‌ನಲ್ಲಿ ಕಾಡಾನೆಗಳ ದಾಳಿ- ತೆಂಗಿನ ಮರ, ಬಾಳೆಗಿಡ ನಾಶ, ಗದ್ದೆ ಬೆಳೆಗೆ ಹಾನಿ

0

ಬೆಳ್ತಂಗಡಿ: ಪುದುವೆಟ್ಟು ಗ್ರಾಮದ ನಡ್ಯೇಲ್ ಭಾಗದಲ್ಲಿ ನಾಲ್ಕೈದು ದಿನಗಳಿಂದ ಕಾಡಾನೆಗಳು ಓಡಾಡುತ್ತಿದ್ದು, ಸೆ.5ರಂದು ರಾತ್ರಿ ಅಪಾರ ಕೃಷಿ ಹಾನಿಗೈದಿವೆ.

ನಡ್ಯೇಲ್ ನಾರಾಯಣ ಗೌಡರ ತೋಟಕ್ಕೆ ದಾಳಿ ಮಾಡಿದ್ದು, ನಾಲ್ಕು ತೆಂಗಿನ ಮರಗಳು, ಬಾಳೆಗಿಡಗಳನ್ನು ಪುಡಿಗೈದಿವೆ. ಭತ್ತ ಬೆಳೆಗೂ ಹಾನಿ ಮಾಡಿವೆ.

ಅರಣ್ಯಾಧಿಕಾರಿ ಭೇಟಿ: ಸ್ಥಳಕ್ಕೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಅನಿತಾ, ಉಪ ವಲಯ ಅರಣ್ಯಾಧಿಕಾರಿ ರವಿಚಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪರಿಹಾರಕ್ಕಾಗಿ ಅರಣ್ಯ ಇಲಾಖೆಗೆ ಅರ್ಜಿ ಸಲ್ಲಿಸುವಂತೆ ಡಿಆರ್‌ಎಫ್ಒ ಸೂಚಿಸಿದ್ದಾರೆ.

ಕಾಡಾನೆ ಓಡಿಸಲು ತಂಡ: ತಾಯಿ ಸಹಿತ ಎರಡು ಕಾಡಾನೆಗಳು ಈ ಭಾಗದಲ್ಲಿ ಹಲವು ದಿನಗಳಿಂದ ಓಡಾಡುತ್ತಿದ್ದು, ಸಂಜೆ-ಬೆಳಗ್ಗೆ ರಸ್ತೆಯಲ್ಲಿ ಸಾಗುವವರಿಗೂ ಕಾಣಸಿಗುತ್ತಿದೆ. ಇದರಿಂದಾಗಿ ಈ ಭಾಗದಲ್ಲಿ ಜನರಿಗೆ ಓಡಾಡುವುದೇ ಕಷ್ಟವಾಗಿದೆ. ಕೃಷಿಗೂ ಹಾನಿ ಮಾಡುತ್ತಿರುವುದರಿಂದ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಆನೆಗಳನ್ನು ಓಡಿಸಲು ನಾಲ್ಕು ಜನ ಸಿಬ್ಬಂದಿಯೊಂದಿಗೆ ಬರುವುದಾಗಿ ಇಲಾಖೆಯ ಅಧಿಕಾರಿ ತಿಳಿಸಿದ್ದು, ಸ್ಥಳೀಯರ ಸಹಕಾರವನ್ನೂ ಕೋರಿದ್ದಾರೆ.

LEAVE A REPLY

Please enter your comment!
Please enter your name here