
ವೇಣೂರು: ಕೃಷ್ಣ ಜನ್ಮಾಷ್ಟಮಿ ಆಚರಣಾ ಸಮಿತಿ ಇವರ ಆಶ್ರಯದಲ್ಲಿ ನಡೆದ 9ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಭಾಗವಹಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಾತನಾಡಿ, “ವಾಸುದೇವ ಕುಟುಂಬ” ಎಂಬ ಪರಿಕಲ್ಪನೆಯನ್ನು ಜಗತ್ತಿಗೆ ನೀಡಿದ ದೇಶ ಭಾರತ. ನಾವೆಲ್ಲರೂ ಒಂದೇ ವಿಶ್ವ ಕುಟುಂಬದ ಸದಸ್ಯರು ಪ್ರೀತಿ ಸಹಬಾಳ್ವೆ ನಮ್ಮಲ್ಲಿ ನೆಲೆಯಾಗಲಿ, ಶಾಂತಿ ಸೌಹಾರ್ದತೆ ಬೆಳೆಯಲಿ ಎಂದರು. ಸಮಿತಿಯ ಗೌರವಾಧ್ಯಕ್ಷ ಧರಣೇಂದ್ರ ಕುಮಾರ್ ರವರು ಎಲ್ಲರಿಗೂ ಸ್ವಾಗತ ಕೋರಿದರು. ಕಾರ್ಯಕ್ರಮದಲ್ಲಿ ಮೂವರು ಸಾಧಕರಿಗೆ ಸನ್ಮಾನಿಸಲಾಯಿತು.
ಎಲಿಜಾ ಸಿಕ್ವೇರಾ, ರಾಷ್ಟ್ರಪ್ರಶಸ್ತಿ ವಿಜೇತೆ ನಿವೃತ್ತ ಅಂಗನವಾಡಿ ಶಿಕ್ಷಕಿ ಜಾನಕಿ ಭಟ್ ನಡ್ತಿಕಲ್, ಮೂಡುಕೋಡಿ ಮಸೀದಿ ಇಮಾಮ್ ಮಹಮ್ಮದ್ ಜೊವ್ಹರ್, ವೇದಿಕೆಯಲ್ಲಿ ಪ್ರೋ.ಕೃಷ್ಣಪ್ಪ ಪೂಜಾರಿಯವರ ಧಾರ್ಮಿಕ ಭಾಷಣ ಮಾಡಿದರು.
ಡಾ.ರಾಜೇಶ್ ಬಾರ್ದಿಲ ಬಡಾರು ಬಜಿರೆ, ವೈದ್ಯಾಧಿಕಾರಿಗಳು ಪ್ರಾಥಮಿಕ ಅರೋಗ್ಯ ಕೇಂದ್ರ ಬಸವಾಪಟ್ಟಣ ಅರಕಲಗೂಡು ಅಧ್ಯಕ್ಷತೆ ವಹಿಸಿದ್ದರು.ಲಯನ್ಸ್ ಕ್ಲಬ್ ಅಧ್ಯಕ್ಷ ಹರೀಶ್ ಪೊಕ್ಕಿ, ವಕೀಲ ನಾಗೇಶ್ ಶೆಟ್ಟಿ, ಪತ್ರಕರ್ತ ಮಹಮ್ಮದ್ ಎಚ್ ವೇಣೂರು, ಗಂಜಿಮಠ ಗ್ರಾ.ಪಂಚಾಯತ್ ಅಧ್ಯಕ್ಷೆ ವನಿತಾ ಎಂ, ಜಿ.ಪ ಮಾಜಿ ಸದಸ್ಯ ಶೇಖರ್ ಕುಕ್ಕೇಡಿ, ಆನಂದ ಶೆಟ್ಟಿ, ಹಿರಿಯರಾದ ಭಾಸ್ಕರ್ ಬಲ್ಯಾಯ, ವೇಣೂರು ನವೋದಯ ಸಹಕಾರಿ ಸಂಘ ಮ್ಯಾನೇಜರ್ ನಿತೀಶ್ ಎಚ್, ಸಮಿತಿ ಅಧ್ಯಕ್ಷ ಪುರುಷೋತ್ತಮ ಪೂಜಾರಿ, ತೋಮಸ್ ನರೊನ್ನಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಮುಖರಾದ ತಾ /ಭೂನ್ಯಾಯ ಮಂಡಲಿ ಸದಸ್ಯ ಇಸ್ಮಾಯಿಲ್ ಕೆ ಪೆರಿಂಜೆ, ಸತೀಶ್ ಚಿಗುರು, ದೇಜಪ್ಪ ಶೆಟ್ಟಿ, ಸತೀಶ್ ಹೆಗ್ಡೆ ಬಜಿರೆ, ಶಶಿಧರ್ ಶೆಟ್ಟಿ ನರಡ್ಕಗುತ್ತು, ಜಕ್ರಿ ಮೂಡುಕೋಡಿ, ಅಶ್ರಫ್ ಶಾಂತಿನಗರ, ರಮೇಶ್ ಪೂಜಾರಿ ಪಡ್ಡಯಿಮಜಲು, ಮಾರ್ಕ್ ಪಿರೇರಾ, ದಯಾನಂದ ದೇವಾಡಿಗ, ಅಳಂತಿಯಾರು ಸೇರಿದಂತೆ ಗಣ್ಯ ಭಕ್ತರು ಉಪಸ್ಥಿತರಿದ್ದರು.
ಅರವಿಂದ ಶೆಟ್ಟಿ ಖಂಡಿಗ ಮತ್ತು ಗಣೇಶ್ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.