ಶಿಬಾಜೆ: ಪೆರ್ಲ ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿ ವತಿಯಿಂದ 39ನೇ ವರ್ಷದ ಮೊಸರು ಕುಡಿಕೆ ಉತ್ಸವ ಆ.27ರಂದು ಮುಂಜಾನೆಯಿಂದ ವಿವಿಧ ಆಟೋಟ ಸ್ಪರ್ಧೆಗಳ ಮೂಲಕ ಆರಂಭವಾಯಿತು.ಊರಿನ ಪರವೂರಿನ ಅನೇಕ ಕ್ರೀಡಾಭಿಮಾನಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದರು. ಸಾಯಂಕಾಲ ಮುದ್ದು ಕೃಷ್ಣ ಸ್ಪರ್ಧೆಯಲ್ಲಿ ಅನೇಕ ಪುಟಾಣಿಗಳು ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.ಸಭಾಕಾರ್ಯಕ್ರಮ ಭಜನಾ ಮಂಡಳಿ ಅಧ್ಯಕ್ಷರಾದ ವಿನಯಚಂದ್ರ ಇವರ ಅಧ್ಯಕ್ಷತೆಯಲ್ಲಿ ನಡೆದು ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಮುದಾಯ ಅರೋಗ್ಯ ಅಧಿಕಾರಿ ಶರಣ ಬಸವ ರವರು ಮಾತನಾಡಿ ಇನ್ನೂ ಮುಂದೆಯು ಮೊಸರು ಕುಡಿಕೆ ಉತ್ಸವ ಅದ್ದೂರಿಯಾಗಿ ನಡೆಯುವಂತಾಗಲಿ ಎಂದು ಶುಭ ಹಾರೈಸಿದರು.
ವೇದಿಕೆಯಲ್ಲಿ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಪೆರ್ಲ ಒಕ್ಕೂಟದ ಅಧ್ಯಕ್ಷರಾದ ಅಣ್ಣು ಗೌಡ, ಸೇವಾಪ್ರತಿನಿಧಿ ಅರುಣಾ, ಊರಿನ ಕ್ರೀಡಾಪಟು ಪುರಂದರ ಗೌಡ ಹಾಗೂ ಹಿರಿಯರಾದ ಲೋಕಯ್ಯ ಗೌಡ, ಭಜನಾ ಮಂಡಳಿ ಗೌರವಧ್ಯಕ್ಷ ತ್ಯಾoಪಣ್ಣ ಶೆಟ್ಟಿಗಾರ್ ಉಪಸ್ಥಿತರಿದ್ದರು.
ಆಟೋಟ ಸ್ಪರ್ಧೆಯ ನಿರ್ವಹಣೆಯನ್ನು ಪ್ರಸನ್ನ ಕಾಲೇಜ್ ದೈಹಿಕ ಶಿಕ್ಷಕ ಶಿವ ಮತ್ತು ಕ್ರಿಸ್ತ ಅಕಾಡಮಿ ದೈಹಿಕ ಶಿಕ್ಷಕ ಪ್ರಸಾದ್ ನಿರ್ವಹಿಸಿದರು.ಕಾರ್ಯಕ್ರಮದ ನಿರೂಪಣೆಯನ್ನು ಮಹೇಶ್ ಶೆಟ್ಟಿಗಾರ್, ಸ್ವಾಗತವನ್ನು ಸದಾಶಿವ ಶೆಟ್ಟಿಗಾರ್, ವಾರ್ಷಿಕ ವರದಿಯನ್ನು ಭಜನಾ ಮಂಡಳಿ ಕಾರ್ಯದರ್ಶಿ ಕಿರಣ್ ಕುಮಾರ್ ಶಾಲೆತ್ತಡ್ಕ, ಬಹುಮಾನ ಪಟ್ಟಿ ವರದಿಯನ್ನು ಶ್ರೇಷ್ಠ ಕುಮಾರ್ ಪೆರ್ಲ, ಧನ್ಯವಾದವನ್ನು ಸ್ವಸ್ತಿಕ್ ಕುಮಾರ್ ನೆರವೇರಿಸಿದರು.