ಬೆಳ್ತಂಗಡಿ: ರಾಜ್ಯ ಸರಕಾರಿ ನೌಕರರ ವಿವಿಧೋದ್ದೇಶ ಸಹಕಾರಿ ಸಂಘದ ಮಹಾಸಭೆ- 20% ಡಿವಿಡೆಂಟ್ ಘೋಷಣೆ

0

ಬೆಳ್ತಂಗಡಿ: ರಾಜ್ಯ ಸರಕಾರಿ ನೌಕರರ ವಿವಿಧೋದ್ದೇಶ ಸಹಕಾರಿ ಸಂಘದ ಮಹಾಸಭೆ ಆ.25ರಂದು ಸಂಘದ ಅಧ್ಯಕ್ಷ ಡಾ.ಕೆ.ಜಯಕೀರ್ತಿ ಜೈನ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.ನಿರ್ದೇಶಕರು ಹಾಗೂ ಸದಸ್ಯರು ಭಾಗವಹಿಸಿದ್ದು 2023-24ನೇ ಸಾಲಿನ ವಾರ್ಷಿಕ ವರದಿ/ಮುಂದಿನ ಕಾರ್ಯ ಯೋಜನೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಿ ಅಂಗೀಕರಿಸಲಾಯಿತು.

ಕಳೆದ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಸದಸ್ಯರ ಮಕ್ಕಳಿಗೆ ವಿಶೇಷ ಪ್ರೋತ್ಸಾಹಕ ನಿಧಿಯೊಂದಿಗೆ ಅಭಿನಂದಿಸಲಾಯಿತು.

ಕ್ಲಪ್ತ ಸಮಯದಲ್ಲಿ ಸಾಲ ಮರುಪಾವತಿಸಿದ ಸಾಲಗಾರರನ್ನು ಗುರುತಿಸಿ ಅಭಿನಂದಿಸಲಾಯಿತು.ಅಧ್ಯಕ್ಷತೆ ವಹಿಸಿದ್ದ ಡಾ.ಕೆ.ಜಯಕೀರ್ತಿ ಜೈನ್ ಕಳೆದ 15 ವರ್ಷಗಳಲ್ಲಿ ಸಹಕಾರಿ ಸಂಘವು ಬೆಳೆದು ಬಂದ ದಾರಿಯನ್ನು ಸಭೆಗೆ ತಿಳಿಸಿದರು.ಉಪಾಧ್ಯಕ್ಷ ಚಿದಾನಂದ ಹೂಗಾರ್ ಸ್ವಾಗತಿಸಿ, ನಿರ್ದೇಶಕ ಕೆ.ಚಂದ್ರಶೇಖರ ವಂದಿಸಿದರು. ಸಲಹೆಗಾರ ವಸಂತ ಸುವರ್ಣ ಕಾರ್ಯಕ್ರಮ ನಿರೂಪಿಸಿದರು. ಸನ್ಮಾನ ಕಾರ್ಯಕ್ರಮವನ್ನು ಧರಣೇಂದ್ರ ಕೆ ಜೈನ್ ನಿರ್ವಹಿಸಿದರು.

ನಿರ್ದೇಶಕರಾದ ಕೆ.ಚಂದ್ರಶೇಖರ, ಅಬ್ದುಲ್ ರಝಾಕ್, ಆರತಿ ಜೈನ್, ಪ್ರಶಾಂತ್ ಕುಮಾರ್, ಹೇಮಲತಾ, ವಾರಿಜ ಕೆ, ಜಯರಾಜ್ ಜೈನ್, ಹರಿಪ್ರಸಾದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವತ್ಸಲಾ ಜ್ಯೋತಿರಾಜ್, ಕೊಕ್ಕಡ ಶಾಖಾಧಿಕಾರಿ ಪಿ.ಅತಿಶಯ್ ಜೈನ್, ಸಿಬ್ಬಂದಿ ವಿಶಾಲ ಹಾಗೂ ಎಲ್ಲಾ ಪಿಗ್ಮಿ ಸಂಗ್ರಾಹಕರು ಉಪಸ್ಥಿತರಿದ್ದರು.

p>

LEAVE A REPLY

Please enter your comment!
Please enter your name here