ಅರಸಿನಮಕ್ಕಿ: ಪ್ರೌಢ ಶಾಲೆಯಲ್ಲಿ ಸಾಹಿತ್ಯ ಪ್ರೇರಣಾ ಕಾರ್ಯಕ್ರಮ

0

ಅರಸಿನಮಕ್ಕಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬೆಳ್ತಂಗಡಿ ತಾಲೂಕು ಘಟಕ ಮತ್ತು ಸರಕಾರಿ ಪ್ರೌಢ ಶಾಲೆ ಅರಸಿನಮಕ್ಕಿ ಇದರ ಆಶ್ರಯದಲ್ಲಿ ಸಾಹಿತ್ಯ ಪ್ರೇರಣಾ ಕಾರ್ಯಕ್ರಮ ಮತ್ತು ಕನ್ನಡ ಸಾಹಿತ್ಯ ಪರಿಷತ್ ಕೊಕ್ಕಡ ಹೋಬಳಿ ಘಟಕದ ಉದ್ಘಾಟನೆ ಆ. 23ರಂದು ಸರಕಾರಿ ಪ್ರಾಢಶಾಲೆ ಸಭಾಂಗಣದಲ್ಲಿ ನೆರವೇರಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀಕರ್ ರಾವ್ ಅಡ್ಕಾರಿ ನೆರವೇರಿಸಿದರು.

ಸಭೆಯ ಅಧ್ಯಕ್ಷೆತೆ ವಹಿಸಿದ್ದ ಬೆಳ್ತಂಗಡಿ ತಾಲೂಕು ಘಟಕ ಕನ್ನಡ ಸಾಹಿತ್ಯ ಪರಿಷತ್ತು ಇದರ ಅಧ್ಯಕ್ಷರಾದ ಯದುಪತಿ ಗೌಡ ಮಾತನಾಡಿ ಸಾಹಿತ್ಯ ನಿರಂತರ ಪ್ರಕ್ರಿಯೆ ಹಳೆಗನ್ನಡ ದಿಂದ ಹೊಸಗನ್ನಡದ ವರೆಗಿನ ಪಯಣ. ಸಾಹಿತ್ಯ ಇಲ್ಲದೆ ಬದುಕಿಲ್ಲ ಸಾಹಿತ್ಯಕ್ಕೆ ಮೂಲ ನಮ್ಮ ಜನಪದ ಎಂದರು. ಸಾಹಿತ್ಯವನ್ನು ಪ್ರತಿದಿನ ಉಪಯೋಗ ಮಾಡಿದರೆ ಮೆದುಳು ಚುರುಕಾಗುತ್ತದೆ. ಹೆತ್ತವರ ಹಿರಿಯವರ ಹೆಸರಿನಿಂದ ನಾವು ಅನಾವರಣಾಗೊಳ್ಳುತ್ತೇವೆ. ಮಕ್ಕಳಲ್ಲಿ ಸಾಹಿತ್ಯದ ಅಭಿರುಚಿ ಮೊಳಕೆಯೊಡೆಯಲಿ ಎಂದು ಹೇಳಿದರು.

ವೇದಿಕೆಯಲ್ಲಿ ದಕ್ಷಿಣ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಂ ಪಿ ಶ್ರೀನಾಥ್, ರಾಮಕೃಷ್ಣ ಭಟ್ ಚೊಕ್ಕಾಡಿ, ಪ್ರೌಢ ಶಾಲಾ ಮುಖ್ಯ ಶಿಕ್ಷಕ ಚಂದ್ರ, ಕೊಕ್ಕಡ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ರೇಣುಕಾ ಸುಧೀರ್ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಶಾಲಾ ವಿದ್ಯಾರ್ಥಿಗಳು, ಸ್ವಾಗತವನ್ನು ಮುಖ್ಯ ಶಿಕ್ಷಕ ಚಂದ್ರ, ಪ್ರಸ್ತಾವಿಕ ನುಡಿಯನ್ನು ರಾಮಕೃಷ್ಣ ಭಟ್, ನಿರೂಪಣೆಯನ್ನು ಮತ್ತು ಧನ್ಯವಾದವನ್ನು ಮಂಜುಳ ನಿರ್ವಹಿಸಿದರು.

p>

LEAVE A REPLY

Please enter your comment!
Please enter your name here