ಜೆಸಿಐ ಭಾರತದ ರಾಷ್ಟ್ರೀಯ ಅಧ್ಯಕ್ಷ ಸಿ.ಆರ್ ರಿಕೇಶ್ ಶರ್ಮಾ ಬಳಂಜ ಶಾಲೆಗೆ ಭೇಟಿ- ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ವತಿಯಿಂದ ಬಳಂಜ ಶಾಲೆಗೆ ರೂ.1ಲಕ್ಷ ಮೊತ್ತದ ಯೋಜನೆಗಳ ಹಸ್ತಾಂತರ

0

ಬೆಳ್ತಂಗಡಿ: ಜೆಸಿಐ ಭಾರತದ ಅಮೃತ ಮಹೋತ್ಸವ ವರ್ಷದ ರಾಷ್ಟ್ರೀಯ ಅಧ್ಯಕ್ಷ ಅಡ್ವಕೇಟ್ ಸಿ.ಆ‌ರ್ ರಿಕೇಶ್ ಶರ್ಮಾ ಆ.21ರಂದು ಬಳಂಜ ಸ.ಹಿ.ಪ್ರಾ. ಶಾಲೆಗೆ ಭೇಟಿ ನೀಡಿದರು.ಜೆಸಿಐ ಬೆಳ್ತಂಗಡಿ ಮಂಜುಶ್ರೀ ವತಿಯಿಂದ ಬಳಂಜ ಶಾಲೆಯ ಅಮೃತ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿರುವ ರೂ.1ಲಕ್ಷ ಮೊತ್ತದ ಶಾಶ್ವತ ಯೋಜನೆಗಳನ್ನು ಹಸ್ತಾಂತರ ಮಾಡಿದರು.

ಬಳಂಜ ಮತ್ತು ಅಟ್ಲಾಜೆ ಶಾಲೆಗೆ ಕಂಪ್ಯೂಟರ್, ಬಳಂಜ ಶಾಲೆ ಮತ್ತು ಕಾಪಿನಡ್ಕ ರಸ್ತೆಗೆ ಬ್ಯಾರಿಕೇಡ್ ಹಸ್ತಾಂತರ ಮಾಡಲಾಯಿತು. ನಂತರ ಮಾತನಾಡಿದ ರಾಷ್ಟ್ರೀಯ ಅಧ್ಯಕ್ಷರು ಗ್ರಾಮೀಣ ಪ್ರದೇಶದ ಸರಕಾರಿ ಶಾಲೆಯಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಕ್ಕೆ ಸಂತೋಷವನ್ನು ವ್ಯಕ್ತಪಡಿಸುತ್ತಾ, ಜೆಸಿಐ ಬೆಳ್ತಂಗಡಿಯ ಕಾರ್ಯ ಚಟುವಟಿಕೆಗಳಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ ಘಟಕದ ಅಧ್ಯಕ್ಷರನ್ನು ಅಭಿನಂದಿಸಿದರು. ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ವಿದ್ಯಾರ್ಥಿಗಳಿಗೆ ನಾಯಕತ್ವ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಜೆಸಿ ಸಂಸ್ಥೆಯು ನೀಡುತ್ತಿರುವ ಕೊಡುಗೆಯನ್ನು ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ಬೆಳ್ತಂಗಡಿ ಮಂಜುಶ್ರೀ ಅಧ್ಯಕ್ಷ ರಂಜಿತ್ ಹೆಚ್.ಡಿ ವಹಿಸಿ, ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿ ವಲಯದ ಹಿರಿಯ ಹಾಗೂ ಪ್ರತಿಷ್ಠಿತ ಬೆಳ್ತಂಗಡಿ ಘಟಕದ 47ನೇ ಅಧ್ಯಕ್ಷರಾಗಿ ಈ ವರ್ಷ ನಡೆಸಿದ ತರಬೇತಿ ಹಾಗೂ ಸಮಾಜಮುಖಿ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು ಮತ್ತು ಜೆಸಿಐಯ ರಾಷ್ಟ್ರೀಯ ಅಧ್ಯಕ್ಷರು ಗ್ರಾಮೀಣ ಭಾಗದ ಸರಕಾರಿ ಶಾಲೆಗೆ ಆಗಮಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ವಲಯ 15ರ ಅಧ್ಯಕ್ಷ ಅಡ್ವಕೇಟ್ ಗಿರೀಶ್ ಎಸ್ ಪಿ, ಉಪಾಧ್ಯಕ್ಷ ಶಂಕರ್ ರಾವ್, ವಲಯ ಅಧಿಕಾರಿಗಳಾದ ಅಭಿಲಾಶ್, ಸತೀಶ್ ಪೂಜಾರಿ, ಬಳಂಜ ಶಾಲಾ ಮುಖ್ಯೋಪಾಧ್ಯಾಯನಿ ಸುಲೋಚನ, ರೆನಿಲ್ದಾ ಉಪಸ್ಥಿತರಿದ್ದರು. ರಾಷ್ಟ್ರೀಯ ಅಧ್ಯಕ್ಷರನ್ನು ಲೇಡಿ ಜೆಸಿ ಸದಸ್ಯರು ಆರತಿಯನ್ನು ಮಾಡಿ, ಶಾಲಾ ಶಿಕ್ಷಕರು ಕಳಸವನ್ನು ಹಾಗೂ ಶಾಲಾ ವಿದ್ಯಾರ್ಥಿಗಳ ಬ್ಯಾಂಡ್ ಮುಖಾಂತರ ಅದ್ದೂರಿಯಾಗಿ ಮೆರವಣಿಗೆಯ ಮುಖಾಂತರ ಬರ ಮಾಡಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಜೆಸಿಐ ರಾಷ್ಟ್ರೀಯ ಅಧ್ಯಕ್ಷರನ್ನು ಬಳಂಜ ಶಾಲೆ,ಜೆಸಿಐ ಬೆಳ್ತಂಗಡಿ ಮಂಜುಶ್ರೀ ಹಾಗೂ ಊರವರ ಪರವಾಗಿ ತುಳುನಾಡಿನ ಸಂಸ್ಕೃತಿಯಲ್ಲಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಜೆಸಿಐ ಬೆಳ್ತಂಗಡಿ ಮಂಜುಶ್ರೀ ಪೂರ್ವಾಧ್ಯಕ್ಷರುಗಳು, ಪಧಾಧಿಕಾರಿಗಳು, ಸದಸ್ಯರು, ಶಾಲಾ ಅಭಿವೃದ್ಧಿ ಸಮಿತಿ, ಶಿಕ್ಷಣ ಟ್ರಸ್ಟ್, ಅಮೃತ ಮಹೋತ್ಸವ ಸಮಿತಿ, ಹಳೆ ವಿದ್ಯಾರ್ಥಿ ಸಂಘ, ಉಮಾ ಮಹೇಶ್ವರ ಯುವಕ ಮಂಡಲ, ಜ್ಯೋತಿ ಮಹಿಳಾ ಮಂಡಲಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಪೋಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪೂರ್ವಾಧ್ಯಕ್ಷ ಪ್ರಸಾದ್ ಬಿ.ಎಸ್ ವೇದಿಕೆ ಆಹ್ವಾನಿಸಿದರು, ಮಹಿಳಾ ಜೆಸಿ ಸಂಯೋಜಕಿ ಶೃತಿ ರಂಜಿತ್‌ ಜೆಸಿವಾಣಿ ಉದ್ಯೋಷಿಸಿದರು, ಪೂರ್ವಾಧ್ಯಕ್ಷ ಪ್ರಶಾಂತ್ ಲಾಯಿಲ ವಂದಿಸಿದರು.

p>

LEAVE A REPLY

Please enter your comment!
Please enter your name here