

ಬೆಳ್ತಂಗಡಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೂ ಬಾಂಗ್ಲಾದೇಶದಂತೆ ಹಾಸಿಗೆ, ದಿಂಬು ಹಿಡಿದುಕೊಂಡು ಹೋಗಬೇಕಾದ ಸ್ಥಿತಿ ಬರುತ್ತದೆ ಎಚ್ಚರ ಎಂದು ಹೇಳಿಕೆ ನೀಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವರನ್ನು ರಿಪಬ್ಲಿಕ್ ಕನ್ನಡ ಸುದ್ದಿ ವಾಹಿನಿ ತೀವ್ರ ತರಾಟೆಗೆ ತೆಗೆದುಕೊಂಡಿದೆ.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮತ್ತು ರಕ್ಷಿತ್ ಶಿವರಾಂ ಅವರು ಬಾಂಗ್ಲಾದೇಶವನ್ನು ಹೋಲಿಸಿ ಹೇಳಿಕೆ ನೀಡಿರುವ ಸಂಬಂಧ ಎಲುಬಿಲ್ಲದ ನಾಲಗೆ ಎಂಬ ಶೀರ್ಷಿಕೆಯಡಿಯಲ್ಲಿ ರಿಪಬ್ಲಿಕ್ ಕನ್ನಡ ವರದಿ ಪ್ರಸಾರ ಮಾಡಿದೆ. ನಿಮಗೂ ಒಂದು ಅವಕಾಶವಿದೆ. ಸಾಧ್ಯವಿದ್ದರೆ ನುಗ್ಗಿ. ನಾವು ಕ್ಯಾಮರಾ ತೆಗೆದುಕೊಂಡು ಬರುತ್ತೇವೆ. ಎಲ್ಲಿಯವರೆಗೆ ನುಗ್ಗುತ್ತೀರಿ ನೋಡೋಣ. ಅಲ್ಲಿ ಸೊಳ್ಳೆ ಹಿಸುಕಿದ ಹಾಕೆ ಹಿಸುಕಿ ಹಾಕುತ್ತಾರೆ, ಸೊಳ್ಳೆಯಂತೆ ಸಾಯಬೇಕಾಗುತ್ತದೆ. ಬಾಂಗ್ಲಾದೇಶದ ಹೋಲಿಕೆಯನ್ನು ಯಾಕೆ ಮಾಡುತ್ತೀರಿ ಎಂದು ಸಂಪಾದಕ ಜಯಪ್ರಕಾಶ್ ಶೆಟ್ಟಿ ಉಪ್ಪಳ ಪ್ರಶ್ನಿಸಿzರೆ.
ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಪ್ರಧಾನಿ ನರೇಂದ್ರ ಮೋದಿಗೂ ಬಾಂಗ್ಲಾದೇಶದ ಸ್ಥಿತಿ ಬರಲಿದೆ ಎಂದು ಕೈ ನಾಯಕ ರಕ್ಷಿತ್ ಶಿವರಾಂಗೆ ಹೇಳಿಕೆಯನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ಚಾನೆಲ್ ‘ಪ್ರಧಾನಿ ವಿರುದ್ಧ ನಾಲಗೆ ಹರಿಬಿಟ್ಟ ಕೈ ನಾಯಕ ರಕ್ಷಿತ್ ಶಿವರಾಂ’ ಎಂದು ಖಂಡಿಸುವ ವರದಿ ಮಾಡಿದೆ.