ಮೈರೋಳ್ತಡ್ಕ: ವರ್ಗಾವಣೆಗೊಂಡಿರುವ ಶಿಕ್ಷಕಿ ಸುರೇಖಾರಿಗೆ ಅಭಿನಂದನಾ ಕಾರ್ಯಕ್ರಮ

0

ಬಂದಾರು: ಬಂದಾರು ಗ್ರಾಮದ ಮೈರೋಳ್ತಡ್ಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಂಟೂವರೇ ವರ್ಷಗಳಿಂದ ಕರ್ತವ್ಯ ನಿರ್ವಹಿಸಿ ಇದೀಗ ಕೂಕ್ರಬೆಟ್ಟು ಶಾಲೆಗೆ ವರ್ಗಾವಣೆಗೊಂಡಿರುವ ಶಿಕ್ಷಕಿ ಸುರೇಖಾ ಇವರಿಗೆ ಆಗಸ್ಟ್ 22ರಂದು ಮೈರೋಳ್ತಡ್ಕ ಶಾಲೆಯಲ್ಲಿ ಶಾಲಾಭಿವೃದ್ಧಿ ಸಮಿತಿ, ಪೋಷಕ ವೃಂದ ಹಾಗೂ ಶಿಕ್ಷಕ ವೃಂದ ಸಹಕಾರದಲ್ಲಿ ಅಭಿನಂದನಾ ಕಾರ್ಯಕ್ರಮ ನೇರವೇರಿತು.

ಈ ಸಂದರ್ಭದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು, ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ದಿನೇಶ್ ಗೌಡ ಖಂಡಿಗ, ಪಂಚಾಯತ್ ಸದಸ್ಯರಾದ ಸುಚಿತ್ರಾ ಮೂರ್ತಾಜೆ, ಪರಮೇಶ್ವರಿ ಕೆ ಗೌಡ ಪುಯಿಲ, ಪ್ರಗತಿಪರ ಕೃಷಿಕ ಹಿರಿಯರಾದ ಕೃಷ್ಣಯ್ಯ ಆಚಾರ್ಯ, ಮೊಗ್ರು ಮುಗೇರಡ್ಕ ಶಾಲಾ ಮುಖ್ಯ ಶಿಕ್ಷಕರಾದ ಮಾಧವ ಗೌಡ, ಮೈರೋಳ್ತಡ್ಕ ಶಾಲಾ ಮುಖ್ಯ ಶಿಕ್ಷಕಿ ಚಂದ್ರಾವತಿ, ಶಾಲಾಭಿವೃದ್ಧಿ ಸಮಿತಿ ಪದಾಧಿಕಾರಿಗಳು, ಶಿಕ್ಷಕ ವೃಂದ, ಪೋಷಕ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವರ್ಗಾವಣೆ ಪಡೆದು ಸನ್ಮಾನ ಸ್ವೀಕರಿಸೀದ ಶಿಕ್ಷಕಿ ಸುರೇಖಾ ಇವರು ನೆನಪಿಗಾಗಿ ತಾನು ಕರ್ತವ್ಯ ನಿರ್ವಹಿಸಿದ ಮೈರೋಳ್ತಡ್ಕ ಶಾಲೆಗೆ ದೊಡ್ಡ ಬೆಲ್ ಗಂಟೆ, ಲ್ಯಾಡರ್ ಕೊಡುಗೆ ನೀಡಿದರು.

LEAVE A REPLY

Please enter your comment!
Please enter your name here