ಉಜಿರೆ: ರುಡ್ ಸೆಟ್ ಸಂಸ್ಥೆಯಲ್ಲಿ ಪೋಟೋಗ್ರಫಿ ಮತ್ತು ವಿಡಿಯೋಗ್ರಫಿ ತರಬೇತಿಯ ಸಮಾರೋಪ- ಪೋಟೋಗ್ರಫಿಯಲ್ಲಿ ಸಮಯ, ಸಂದರ್ಭ, ಭಾವನೆಗಳು ಬಹು ಮುಖ್ಯ: ಡಾ.ಡಿ.ವೀರೇಂದ್ರ ಹೆಗ್ಗಡೆ

0

ಉಜಿರೆ: ಫೋಟೋಗ್ರಫಿಯ ವೃತ್ತಿಯಲ್ಲಿ ಯಾವ ಸಂದರ್ಭದಲ್ಲಿ, ಯಾವ ಉದ್ದೇಶ ಯಾವ ಸಮಯದಲ್ಲಿ ಭಾವನೆಗಳನ್ನು ನೋಡಿ ಫೋಟೋ ತೆಗೆಯುವ ಜಾಣ್ಮೆಯನ್ನು ಹೊಂದಿರುವುದು ಬಹುಮುಖ್ಯ. ಫೋಟೋಗ್ರಫಿ ಬಹಳ ಗಂಭೀರವಾದ ವಿಷಯ ಎಲ್ಲ ಕಡೇ ದಾಖಲೆಯಾಗಿ ಬಳಸುದಂತಾಗಿದೆ. ಇನ್ನೂ ಫೋಟೋಗ್ರಫಿಯಲ್ಲಿ ಬೆಳಕಿನ ಮಹತ್ವವನ್ನು ತಿಳಿದುಕೊಳ್ಳಬೇಕು, ಯಾವ ಬೆಳಕಿನಲ್ಲಿ ಯಾವ ರೀತಿಯ ಫೋಟೋ ತೆಗೆಯಬೇಕು, ಫೋಟೋ ತೆಗೆಯುವ ಮೊದಲು ಮೂಡ್‌ ಅನ್ನು ಗಮನಿಸಬೇಕು ಆವಾಗ ಮಾತ್ರ ಸುಂದರವಾದ ಫೋಟೋ ಮೂಡಿಬರುತ್ತದೆ. ಅಲ್ಲದೇ ಆಲ್ಬಾಮ್‌ ಮಾಡುವಾಗ ಹತ್ತು ಸರಿ ನೋಡುವ ರೀತಿಯಲ್ಲಿ ತಯಾರಿಸಬೇಕು. ಇವತ್ತು ವಿವಿಧ ರೀತಿಯ ಪ್ರಿಂಟಿಂಗ್‌ ಪೇಪರ್‌ ಬಂದಿದೆ ಅದರ ಜ್ಞಾನ ಇರಲಿ. ಜೀವನದಲ್ಲಿ ಶಿಸ್ತು ಕಲಿತ್ತಿದ್ದೀರಿ, ಬದುಕಿನಲ್ಲಿ ಶಿಸ್ತು ಸಹ ಮುಖ್ಯ ಅದನ್ನು ಮುಂದುರೆಸಿಕೊಳ್ಳಿ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು, ರುಡ್‌ ಸೆಟ್‌ ಸಂಸ್ಥೆಗಳ ಅಧ್ಯಕ್ಷ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಅಭಿಪ್ರಾಯಪಟ್ಟರು.

ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ 30 ದಿನಗಳ ಕಾಲ ನಡೆದೆ ಪೋಟೋಗ್ರಫಿ ಮತ್ತು ವಿಡಿಯೋಗ್ರಫಿ ತರಬೇತಿಯ ಸಮಾರೋಪ ಸಮಾರಂಭ ಹಾಗೂ ವಿಶ್ವ ಫೋಟೋಗ್ರಾಫರ್ಸ್‌ ದಿನಾಚರಣೆಯಲ್ಲಿ ಭಾಗವಹಿಸಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತ್ತರಿಸಿ, ಧರ್ಮಸ್ಥಳದ ಮ್ಯೂಸಿಯಂನಲ್ಲಿ ಸುಮಾರು 700 ಕ್ಯಾಮರಾಗಳು ಇವೆ. ಇದು ಪೋಟೋಗ್ರಫಿಯಲ್ಲಿ ಕ್ಯಾಮರಗಳ ಮೌಲ್ಯ ವರ್ಧನೆಯನ್ನು ತೋರಿಸುತ್ತದೆ.ಇದನ್ನು ಗಮನದಲ್ಲಿ ಇಟ್ಟುಕೊಂಡು ಮುಂದಿನ ಬೆಳವಣಿಗೆಯನ್ನು ನಿಮ್ಮ ಬುದ್ದಿವಂತಿಕೆಯಲ್ಲಿ ಮಾಡಿಕೊಳ್ಳಬೇಕು ಎಂದು ತಿಳಸಿ ಶುಭ ಹಾರೈಸಿದರು.

ಸಮಾರಂಭದ ವೇದಿಕೆಯಲ್ಲಿ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್‌ ಜನಾರ್ದನ ಭಾಗವಹಿಸಿ, ರುಡ್‌ ಸೆಟ್‌ ಸಂಸ್ಥೆಯು ಬೆಳದು ಬಂದ ದಾರಿಯನ್ನು ನೆನಪಿಸಿದರು.ಕಾರ್ಯಕ್ರಮದಲ್ಲಿ ರುಡ್ ಸೆಟ್ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಪಿ.ವಿಜಯ ಕುಮಾರ್ ಭಾಗವಹಿಸಿದ್ದರು.ಪೋಟೋಗ್ರಾಫಿ ಮತ್ತು ವೀಡಿಯೋಗ್ರಫಿ ತರಬೇತಿಯ ಅತಿಥಿ ಉಪನ್ಯಾಸಕ ಸೂರ್ಯಪ್ರಕಾಶ ಉಪಸ್ಥಿತರಿದ್ದರು.

ರುಡ್ ಸೆಟ್ ಸಂಸ್ಥೆಯ ನಿರ್ದೇಶಕ ಅಜೇಯ ಅವರು ಸ್ವಾಗತಿಸಿದರು. ಸಂಸ್ಥೆಯ ಹಿರಿಯ ಉಪನ್ಯಾಸಕ ಅಬ್ರಹಾಂ ಜೇಮ್ಸ್ ಕಾರ್ಯಕ್ರಮ ನಿರೂಪಿಸಿದರು ಉಪನ್ಯಾಸಕ ಕೆ.ಕರುಣಾಕರ ಜೈನ್ ವಂದಿಸಿದರು. ಸುಮಾರು 31 ಜನ ಶಿಬಿರಾರ್ಥಿಗಳು ಭಾಗವಹಿಸಿದ್ದರು, ಹೇಮಂತ್ ಪ್ರಾರ್ಥನೆ ಮಾಡಿದರು, ಜಯರಾಮ್‌, ಸಿದ್ಧಾರ್ಥ ತರಬೇತಿಯ ಅನುಭವ ಹಂಚಿಕೊಂಡರು.

p>

LEAVE A REPLY

Please enter your comment!
Please enter your name here