ಬೆಳ್ತಂಗಡಿ: ನೀರು ಮಾನವನಿಗೆ ಎಲ್ಲಾ ಕಾರ್ಯಗಳಿಗೂ, ಸೇವನೆಗೂ ಬೇಕಾದ ಮೂಲ ವಸ್ತು. ನೀರಿಲ್ಲದೆ ಕೃಷಿಯೂ ಇಲ್ಲ, ಉದ್ದಿಮೆಗಳೂ ಇಲ್ಲ, ಜೀವನವೂ ಇಲ್ಲಾ. ನೀರನ್ನು ನಮಗೆ ಕೊಡುವುದು ಪ್ರಕೃತಿ. ನಮಗೆ ನೀರು ಪ್ರಕೃತಿಯಲ್ಲದೆ ಬೇರೆ ಯಾವ ಮೂಲದಿಂದಲೂ ಸಿಗುದಿಲ್ಲಾ. ಹಿಂದೆ ನೀರು ಧಾರಾಳವಾಗಿ ನಮಗೆ ಉಚಿತವಾಗಿ ಸಿಗುತಿತ್ತು. ಆದರೆ ಇಂದು ಬೇಸಗೆ ಬಂದರೆ ನೀರಿಗೆ ಬರ. ಆದರೆ ನೀರಿಗೆ ನಿಜವಾಗಿ ಬರ ಇಲ್ಲ. ಬರ ಇರುವುದು ಸ್ವಾಭಾವಿಕವಾಗಿ ಸಿಗುವ ನೀರನ್ನು ಹಿಡಿದು ಇಟ್ಟುಕೊಳ್ಳುವಲ್ಲಿ ಇರುವ ಜಾಣ್ಮೆಯಲ್ಲಿ.ಸಾಮಾಜಿಕ ಕಾಳಜಿಯಲ್ಲಿ ಸದಾ ಮಂಚೂಣಿಯಲ್ಲಿ ಇರುವ ರೋಟರಿ ಕ್ಲಬ್ ಬೆಳ್ತಂಗಡಿ. ಎರಡು ವಿಭಿನ್ನ ಕಾರ್ಯಕ್ರಮ ಹಮ್ಮಿಕೊಂಡಿತು. ಅದುವೇ ‘ಜಲನಿಧಿ’ ಮತ್ತು ‘ಕೃಷಿ ನಿಧಿ’.
ನೀರನ್ನು ಹಿಡಿದು ಇಟ್ಟು ನೆಲದಲ್ಲಿ ಪೂರಣ ಗೊಳಿಸುವಲ್ಲಿ ಭತ್ತದ ಗದ್ದೆಗಳು ದೊಡ್ಡ ಪಾತ್ರ ವಹಿಸುತ್ತವೆ ಅದರ ಬಗ್ಗೆ ಪ್ರಾತ್ಯ ಕ್ಷತೆ ಮಕ್ಕಳಿಗೆ ಮಾಡಿ ಕೊಡಲಾಯಿತು. ಇನ್ನು ಕೃಷಿ ಬಗ್ಗೆ ಇಂದಿನ ಮಕ್ಕಳಿಗೆ ಮಾತ್ರ ವಲ್ಲಾ, ಪಟ್ಟಣದಲ್ಲಿ ಇರುವ ಹಿರಿಯರಿಗೂ ಮಾಹಿತಿ ಇಲ್ಲಾ. ಕೃಷಿ ಬಗ್ಗೆ ಮಾಹಿತಿ ಕೊಡಲು ಕೃಷಿ ನಿಧಿ ಕಾರ್ಯಕ್ರಮ ಬೆಳ್ತಂಗಡಿ ರೋಟರಿ ಕ್ಲಬ್ ಹಮ್ಮಿಕೊಂಡಿತು.
ಬೆಳ್ತಂಗಡಿ ರೋಟರಿ ಕ್ಲಬ್ ನ ಅಧ್ಯಕ್ಷ ಪೂರನ್ ವರ್ಮಾ ಅವರ ಭತ್ತದ ಗದ್ದೆಯ ಸುಂದರ ಪರಿಸರದಲ್ಲಿ ಸೊಗಸಾಗಿ ಮೂಡಿ ಬಂತು. ಸ್ವಾಭಾವಿಕವಾಗಿ ಬಂದ ಮಳೆ ಕಾರ್ಯಕ್ರಮಕ್ಕೆ ಹೆಚ್ಚು ಮೆರಗು ಕೊಟ್ಟಿತು. ಮಹಿಳೆಯರು, ಮಕ್ಕಳು ಕಾರ್ಯಕ್ರದಲ್ಲಿ ಭಾಗವಹಿಸಿದ್ದರು.
ಕಷಾಯಗಳು, ಗಂಜಿ ಊಟ, ಹಲಸಿನ ಪಾಯಸ ಸಮಯೋಜಿತವಾಗಿತ್ತು. ಉಟ್ಟಾರೆ ಎಲ್ಲಾ ರೋಟರಿಯನ್ ಗಳು, ಆನ್ ಗಳು, ಆನೆಟ್ ಗಳು ಮುದಗೊಂಡರು. ಮಕ್ಕಳು ಮಣ್ಣಿನ ಗದ್ದೆಯಲ್ಲಿ ಮಣ್ಣಿನ ಮಕ್ಕಳಂತೆ ಕುಣಿದಾಡಿದರು.