ಕಾಶಿಪಟ್ಣ:ಸ.ಹಿ.ಪ್ರಾ.ಶಾಲೆಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮ ಸಡಗರಗಳಿಂದ ಆಚರಿಸಲಾಯಿತು.ಎಂಟುವರೆಗೆ ಶಾಲೆಯಿಂದ ಬ್ಯಾಂಡ್ ಸೆಟ್ ನೊಂದಿಗೆ ಹೊರಟು ಮಕ್ಕಳ ಮೆರವಣಿಗೆ ಗ್ರಾಮ ಪಂಚಾಯತಿ ಕಾಶಿಪಟ್ಣದಲ್ಲಿ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಮೆರವಣಿಗೆ ಸಮಯದಲ್ಲಿ ಜುಮ್ಮಾ ಮಸೀದಿ ಕಾಶಿಪಟ್ನ ಇವರ ವತಿಯಿಂದ ಮಕ್ಕಳಿಗೆ ಪಾನಕ ಹಾಗೂ ಸಿಹಿ ತಿಂಡಿ ವ್ಯವಸ್ಥೆ ಮಾಡಲಾಯಿತು.ನಂತರ ಸ.ಹಿ.ಪ್ರಾ.ಶಾಲೆ ಕಾಶಿಪಟ್ಣದಲ್ಲಿ ಶಾಲಾ ಧ್ವಜಾರೋಹಣವನ್ನು ಎಸ್.ಡಿ.ಎಂ.ಸಿ ಅಧ್ಯಕ್ಷ ವಿದ್ಯಾನಂದ ಇವರು ನೆರವೇರಿಸಿದರು.
ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷರು, ಅಧ್ಯಕ್ಷರು, ಸದಸ್ಯರು, ಎಸ್ ಟಿ ಎಮ್ ಸಿ ಸದಸ್ಯರುಗಳು, ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷರು ಹಾಗೂ ಊರಿನ ಹಿರಿಯರಾದ ಪಿ.ಕೆ.ರಾಜು ಪೂಜಾರಿ, ಗರೋಡಿ ಫ್ರೆಂಡ್ಸ್ ಕಾಶಿಪಟ್ನ ಇದರ ಸದಸ್ಯರುಗಳು, ಪೋಷಕರು ಊರ ವಿದ್ಯಾಭಿಮಾನಿಗಳು ಭಾಗವಹಿಸಿದರು. ಪಂಚಾಯತ್ ವತಿಯಿಂದ ಮಕ್ಕಳಿಗೆ ಸಿಹಿ ತಿಂಡಿ ವ್ಯವಸ್ಥೆ ಮಾಡಲಾಯಿತು.
ತದನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ನಿರ್ಗಮಿತ ಎಸ್ ಡಿ ಎಮ್ ಸಿ ಅಧ್ಯಕ್ಷ ಶುಭಕರ್ ಕೋಟ್ಯಾನ್ ಹಾಗೂ ಸದಸ್ಯರಾದ ಸುಧಾ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು.ಶಾಲೆಗೆ ವಿವಿಧ ರೀತಿಯ ಕೊಡುಗೆಯನ್ನು ನೀಡಿದ ದಾನಿಗಳನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಸಭಾ ಕಾರ್ಯಕ್ರಮದ ನಂತರ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸರ್ವರಿಗೂ ಭೋಜನ ವ್ಯವಸ್ಥೆ ಇದ್ದು, 78ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವು ಬಹಳ ಅರ್ಥಪೂರ್ಣವಾಗಿ ನೆರವೇರಿತು.
ಎಸ್.ಕೆ.ಎಸ್.ಎಸ್.ಎಫ್ ಕಾಶಿಪಟ್ಣ ಶಾಖೆ ವತಿಯಿಂದ ಸ್ವಾತಂತ್ರ್ಯ ದಿನದ ಭಾಗವಾಗಿ ಶಾಲಾ ಮಕ್ಕಳಿಗೆ ತಂಪು ಪಾನಿಯ ಹಾಗೂ ಸಿಹಿ ವಿತರಿಸಲಾಯಿತು.ಜಮಾಅತ್ ಅಧ್ಯಕ್ಷರಾದ ಕೆ ಎಸ್ ಪುತ್ತುಮೋನು, ಸೆಕೆಟ್ರಿ ಪಿ ಹೆಚ್ಚ್ ಅಬ್ದುರಹ್ಮಾನ್, ಎಸ್.ಕೆ.ಎಸ್.ಎಸ್.ಎಫ್ ಪಡ್ಡಂತಡ್ಕ ಕ್ಲಸ್ಟರ್ ಪ್ರೆಸಿಡೆಂಟ್ ಖಾಲಿದ್, ಎಸ್.ಕೆ.ಎಸ್.ಎಸ್.ಎಫ್ ಪ್ರೆಸಿಡೆಂಟ್ ಹಮೀದ್, ಸೆಕೆಟ್ರಿ ಸಹದ್, ವಿಜಿಲೆಂಟ್ ವಿಖಾಯ ಕಾರ್ಯಕರ್ತರು ಸಹಕರಿಸಿದರು.