ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಸಾರ್ವಜನಿಕ ಶ್ರೀ ಗೌರಿ ಗಣೇಶೋತ್ಸವ ಸೇವಾ ಸಮಿತಿ ವತಿಯಿಂದ ಆ. 9ರಿಂದ 15ರವರೆಗೆ ಸಂಜೆ 6ರಿಂದ 8ರವರೆಗೆ ಬೆಳ್ತಂಗಡಿ ಸಮಾಜ ಮಂದಿರದಲ್ಲಿ ವೀಣಾ ಬನ್ನಂಜೆ ಇವರಿಂದ ನಡೆದ ಶ್ರೀಮದ್ ಭಾಗವತ ಪ್ರವಚನ ಸಪ್ತಾಹದ ಸಮಾರೋಪ ಸಮಾರಂಭ ಆ.15ರಂದು ಜರಗಿತು.
ಬೆಳ್ತಂಗಡಿ ತಾಲೂಕು ಸಾರ್ವಜನಿಕ ಶ್ರೀ ಗೌರಿ ಗಣೇಶೋತ್ಸವ ಸೇವಾ ಸಮಿತಿಯ ಅಧ್ಯಕ್ಷರು ನಿಕಟ ಪೂರ್ವ ವಿಧಾನ ಪರಿಷತ್ ಸದಸ್ಯ ಕೆ.ಹರೀಶ್ ಕುಮಾರ್ ಮಾತನಾಡಿ ಬೆಳ್ತಂಗಡಿಯಲ್ಲಿ ನಡೆದ ಈ ಕಾರ್ಯಕ್ರಮ ಪವಿತ್ರವಾದ ಕೆಲಸವಾಗಿ ಜನರಿಗೆ ಬೇಕಾದಂತ ಜೀವನ ಮೌಲ್ಯ ಸಿಕ್ಕಿದೆ. ಕಾರ್ಯಕ್ರಮ ಆಯೋಜನೆ ಮಾಡುವ ಮೊದಲು ಜನ ಸೇರುವ ಆತಂಕ ಇತ್ತು.
ತಾಲೂಕಿನ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶಿಸ್ತು ಭದ್ದವಾಗಿ ನಡೆಯಲು ಸಹಕಾರ ನೀಡಿದ್ದಾರೆ ಎಂದರು. ಶ್ರೀ ಗುರುದೇವ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಪ್ರೊ. ಎ. ಕೃಷ್ಣಪ್ಪ ಪೂಜಾರಿ ಅನಿಸಿಕೆ ವ್ಯಕ್ತ ಪಡಿಸಿ ಯಶಸ್ವಿ ಕಾರ್ಯಕ್ರಮವಾಗಿದೆ ಎಂದರು.ಉಪನ್ಯಾಸಕ ಶ್ರೀಶ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಸಂಯೋಜಕ ಹಿರಿಯ ವಾಹನ ನೀರಿಕ್ಷ ಕೆ. ಚರಣ್ ಕುಮಾರ್ ವಂದಿಸಿದರು. ತಾಲೂಕು ಸಾರ್ವಜನಿಕ ಶ್ರೀ ಗೌರಿ ಗಣೇಶೋತ್ಸವ ಸೇವಾ ಸಮಿತಿ, ಬೆಳ್ತಂಗಡಿ ಲಯನ್ಸ್ ಕ್ಲಬ್, ಬೆಳ್ತಂಗಡಿ ಮಂಜುಶ್ರೀ ಜೇಸಿಐ, ಬೆಳ್ತಂಗಡಿ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಪದಾಧಿಕಾರಿಗಳು ವೀಣಾ ಬನ್ನಂಜೆಯವರನ್ನು ಗೌರವಿಸಿದರು.
ಕಾರ್ಯಕ್ರಮ ಯಶಸ್ವಿಗೆ ಸಹಕಾರ ನೀಡಿದ ಪಪ್ಪುಸೌಂಡ್ಸ್ ಶಬೀರ್, ಉಪಹಾರ ವ್ಯವಸ್ಥೆ ಮಾಡಿದ ಕೆ ಶೈಲೇಶ್ ಕುಮಾರ್, ಜಯರಾಜ್,, ವೆಂಕಟೇಶ್ ಬೆಂಡೆ ಇವರನ್ನು ಗೌರವಿಸಲಾಯಿತು.