ಪದ್ಮುಂಜ ಮಸೀದಿಯಲ್ಲಿ ಸ್ವಾತಂತ್ರ್ಯೋತ್ಸವ

0

ಪದ್ಮುಂಜ: ಖಲಂದರ್ ಷಾ ಜುಮಾ ಮಸೀದಿಯಲ್ಲಿ 78 ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ಎಸ್ ಎಸ್ ಎಫ್ ಅಧ್ಯಕ್ಷ ನಾಸಿರ್ ರವರ ಅಧ್ಯಕ್ಷತೆಯಲ್ಲಿ ಜರಗಿತು ಜಮಾತ್ ಅಧ್ಯಕ್ಷ ರಫೀಕ್ ರವರು ಈ ಧ್ವಜಾರೋಹಣ ನೆರವೇರಿಸಿದರು.

ಮುಖ್ಯಗುರುಗಳಾದ ಮುಹಮ್ಮದ್ ನಿಜಾಮುದ್ದೀನ್ ಝುಹುರಿ ಯವರು ದುಆ ನೆರವೇರಿಸಿದರು. ಜಮಾಅತ್ ಪ್ರ ಕಾರ್ಯದರ್ಶಿ ಕಾಸಿಂ ಪದ್ಮುಂಜ ರವರು ಸ್ವಾತಂತ್ರ್ಯೋತ್ಸವದ ಬಗ್ಗೆ ಮಾತನಾಡಿದರು.ಈ ಸಂಧರ್ಭದಲ್ಲಿ ಮಾಜಿ ಸೈನಿಕ ಗಣೇಶ್ ಶೆಟ್ಟಿ ಯವರನ್ನು ಗೌರವಿಸಿ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಮದರಸ ಅಧ್ಯಾಪಕ ಅಬ್ದುರ್ರಶೀದ್ ಹಿಕಮಿ ಜಮಾಅತ್ ಕೋಶಾಧಿಕಾರಿ ಯುಸುಫ್ ಹಾಜಿ ಶಫೀಖ್ ಸಖಾಫಿ ಪದ್ಮುಂಜ, ಸಹ ಕಾರ್ಯದರ್ಶಿ ಮುಹಮ್ಮದ್ ಖಲಂದರ್ ಪದ್ಮುಂಜ, ಎಸ್ ಎಸ್ ಎಫ್ ಕೋಶಾಧಿಕಾರಿ ಮುನೀರ್ ಅಂತರ ಉಪಸ್ಥಿತರಿದ್ದರು.ಸೆಕ್ಟರ್ ಕಾರ್ಯದರ್ಶಿ ನಿಜಾಮುದ್ದೀನ್ ನನ್ಯ ಸ್ವಾಗತಿಸಿದರು.ಎಸ್ ಎಸ್ ಎಫ್ ಕಾರ್ಯದರ್ಶಿ ಅಸ್ಫಖ್ ಧನ್ಯವಾದ ಸಲ್ಲಿಸಿದರು.

LEAVE A REPLY

Please enter your comment!
Please enter your name here