ಕಾರಿಂಜ: ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

0

ಕಾರಿಂಜ: ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಮುಖ್ಯ ಶಿಕ್ಷಕಿ ಗಿರಿಜಾ.ಎನ್ ಎಲ್ಲರನ್ನೂ ಕಾರ್ಯಕ್ರಮಕ್ಕೆ ಸ್ವಾಗತಿಸಿದರು.

ಎಸ್.ಡಿ.ಎಮ್. ಸಿ ಅಧ್ಯಕ್ಷರಾದ ಜಗನ್ನಾಥ. ರೈ. ಧ್ವಜಾರೋಹಣ ಮಾಡಿದರು. ನಿವೃತ್ತ ಮುಖ್ಯ ಶಿಕ್ಷಕರಾದ ಧರ್ಣಪ್ಪ ನಾಯ್ಕರವರು ಸ್ವಾತಂತ್ರ್ಯ ದಿನಾಚರಣೆ ಮಹತ್ವದ ಬಗ್ಗೆ ಮಾಹಿತಿ ನೀಡಿದರು.

ಎಲ್ಲಾ ವಿದ್ಯಾರ್ಥಿಗಳಿಗೂ ಸ್ಪರ್ಧೆ ಏರ್ಪಡಿಸಿ ಬಹುಮಾನ ವಿತರಣೆ ಮಾಡಲಾಯಿತು. ನಿವೃತ್ತ ಮುಖ್ಯಗುರುಗಳಾದ ದಿವಂಗತ ಶಾರದಾ ವೈ ಇವರ ಸ್ಮರಣಾರ್ಥ ಇವರ ಮಗ ರಾಘವೇಂದ್ರ ಪ್ರಸಾದ್ ಎಲ್ಲ ವಿದ್ಯಾರ್ಥಿಗಳಿಗೂ ಲೇಖನಿ ಸಾಮಾಗ್ರಿಗಳನ್ನು ವಿತರಿಸಿದರು.

ಸಹಶಿಕ್ಷಕ ಪರಮೇಶ್ವರ ಎಸ್ ಕಾರ್ಯಕ್ರಮ ನಿರೂಪಿಸಿದರು.ವಂದನಾರ್ಪಣೆ ಯೊಂದಿಗೆಕಾರ್ಯಕ್ರಮ ಮುಕ್ತಾಯ ವಾಯಿತು.

LEAVE A REPLY

Please enter your comment!
Please enter your name here